ತಮಿಳುನಾಡು: ಆರು ಸೀಟುಗಳಲ್ಲಿ ಸಿಪಿಐ ಸ್ಪರ್ಧೆ

0
364

ಸನ್ಮಾರ್ಗ ವಾರ್ತೆ

ಚೆನ್ನೈ: ತಮಿಳ್ನಾಡಿನ ಸಿಪಿಐ ವಿಧಾನಸಭೆಯ ಆರು ಸೀಟುಗಳಲ್ಲಿ ಸ್ಪರ್ಧಿಸಲಿದ್ದು ಇದು ಡಿಎಂಕೆ ಘಟಕ ಪಕ್ಷವಾಗಿದೆ. ಸೀಟು ಹೊಂದಾಣಿಕೆ ಒಪ್ಪಂದ ಪತ್ರವನ್ನು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಮತ್ತು ಸಿಪಿಐ ರಾಜ್ಯ ಅಧ್ಯಕ್ಷ ಆರ್. ಮುತ್ತರಸನ್‍ಗೆ ನೀಡಿದ್ದಾರೆ. ಸಿಪಿಐ ಹತ್ತು ಸೀಟು ಕೇಳಿತ್ತು. ಸಿಪಿಐ, ಸಿಪಿಎಂ ತಲಾ ನಾಲ್ಕು ಸೀಟು ನೀಡಲು ಸಾಧ್ಯ ಎಂದು ಡಿಎಂಕೆ ಹೇಳಿತ್ತು. ಈ ನಡುವೆ ಸಿಪಿಐ ಅತೃಪ್ತಿ ವ್ಯಕ್ತಪಡಿಸಿದ್ದರಿಂದ 2006, 2011ರಲ್ಲಿ ಸಿಪಿಎಂಗೆ ಹತ್ತರಷ್ಟು ಸೀಟುಗಳು ಸಿಕ್ಕಿದ್ದವು. ಸಖ್ಯ ಪಾರ್ಟಿಯಾದ ದಲಿತ ಸಂಘಟನೆಯಾದ ತಿರುಮಾವಳವರ ವಿಡುದಲೈ ಚಿರುತೈ ಕಚ್ಚಿಗೆ(ವಿಸಿಕೆ) ಆರು ಸೀಟು ಮುಸ್ಲಿಂ ಲೀಗಿನ ಮೂರು ಸೀಟು, ಮನಿದನೇಯ ಮಕ್ಕಳ್ ಕಕ್ಷಿಗೆ ಎರಡು ಸೀಟು ಡಿಎಂಕೆ ನೀಡಿದೆ. ವೈಕೊರ ಎಂಡಿಎಂಕೆಗೆ ಐದು ಸೀಟು ನೀಡಲಿದೆ.

ತಮಿಳ್ನಾಡಿನ ವಿಧಾನಸಭೆಯಲ್ಲಿ ಒಟ್ಟು 234 ಸೀಟುಗಳಿವೆ. ಸ್ವಂತ ನೆಲೆಯಲ್ಲಿ ಬಹುಮತ ಪಡೆಯುವ ಉದ್ದೇಶದಿಂದ 175 ಸೀಟುಗಳಲ್ಲಾದರೂ ಸ್ಪರ್ಧಿಸಬೇಕೆಂದು ಡಿಎಂಕೆ ನಿರ್ಧರಿಸಿದೆ. ಕಾಂಗ್ರೆಸ್ 30 ಸೀಟುಗಳನ್ನು ಕೇಳುತ್ತಿದೆ. ಆದರೆ 18 ಸೀಟುಗಳಿಗಿಂತ ಹೆಚ್ಚು ಕೊಡಲಾಗದು ಎಂದು ಡಿಎಂಕೆ ಹೇಳುತ್ತಿದೆ. 20ಕ್ಕೂ ಹೆಚ್ಚು ಸೀಟು ನೀಡಲಾಗುವುದು ಎಂದು ಹೇಳಲಾಗುತ್ತಿದೆ. 2016ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 41 ಸೀಟುಗಳಲ್ಲಿ ಸ್ಪರ್ಧಿಸಿತ್ತು. ಎಂಟು ಸೀಟು ಗೆದ್ದಿತ್ತು. ಎಪ್ರಿಲ್ ಆರಕ್ಕೆ ತಮಿಳ್ನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಮೇ ಎರಡಕ್ಕೆ ಫಲಿತಾಂಶ ಪ್ರಕಟವಾಗಲಿದೆ.