ನಿರಾಶ್ರಿತರ ಶಿಬಿರದ ಮೇಲೆ ಮತ್ತೆ ಇಸ್ರೇಲ್ ದಾಳಿ; 30 ಮಂದಿ ಮೃತ

0
207

ಸನ್ಮಾರ್ಗ ವಾರ್ತೆ

ಗಾಜಾ ಸಿಟಿ: ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಮತ್ತೆ ದಾಳಿ ಮಾಡಿದೆ. ಜಬಾಲಿಯಾ ಶಿಬಿರದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ 30 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಸಿವಿಲ್ ಡಿಫೆನ್ಸ್ ತಿಳಿಸಿದೆ. 27 ಮಂದಿ ಗಾಯಗೊಂಡಿದ್ದಾರೆ.

ಫೆಲಸ್ತೀನಿನ ನಿರಾಶ್ರಿತರಿಗಾಗಿರುವ ಜಬಲಿಯದ ಶಿಬಿರವನ್ನು ವಿಶ್ವಸಂಸ್ಥೆಯ ಏಜೆನ್ಸಿ ರಿಲೀಫ್ ಆಂಡ್ ವಕ್ಸ್ ಏಜೆನ್ಸಿ ನಡೆಸುತ್ತಿದೆ. ಈ ಶಿಬಿರ ಮತ್ತು ಮೂರು ಶಾಲೆಗಳಿಗೆ ಇಸ್ರೇಲ್ ಬಾಂಬು ಸುರಿಸಿದೆ. ಮದ್ದು ಮತ್ತು ಮೆಡಿಕಲ್ ಉಪಕರಣದ ಕೊರತೆ ತೀವ್ರಗೊಂಡಿದೆ ಎಂದು ಉತ್ತರ ಗಾಝದ ಇಂಡೊನೇಶಿಯನ್ ಆಸ್ಪತ್ರೆ ನಿರ್ದೇಶಕರು ತಿಳಿಸಿದರು.

ಈ ಹಿಂದೆ ಇಸ್ರೇಲ್ ಈ ಶಿಬಿರದ ಮೇಲೆ ದಾಳಿ ಮಾಡಿತ್ತು. ಅಕ್ಟೋಬರ್ 9 ರಂದು ಕ್ಯಾಂಪ್‌ನಲ್ಲಿನ ಮಾರುಕಟ್ಟೆಯ ಮೇಲೆ ನಡೆದ ದಾಳಿಯಲ್ಲಿ ಸತ್ತವರ ಸಂಖ್ಯೆ ಇನ್ನೂ ಲಭ್ಯವಿಲ್ಲ ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ವರದಿ ಮಾಡಿದೆ.

ನಿನ್ನೆ ಅತಿಕ್ರಮಿತ ವೆಸ್ಟ್ ಬ್ಯಾಂಕಿನ ನಿರಾಶ್ರಿತರ ಶಿಬಿರಕ್ಕೆ ಇಸ್ರೇಲ್ ದಾಳಿ ಮಾಡಿತು. ಇಲ್ಲಿ ಇಬ್ಬರು ಫೆಲಸ್ತೀನಿ ಆರೋಗ್ಯ ಕಾರ್ಯಕರ್ತರು ಮೃತ ಪಟ್ಟಿದ್ದಾರೆ. ಹಮಾಸ್ ನಿರಾಶ್ರಿತರೊಳಿಗಿದೆ ಎಂದು ಅಲ್ಲಿಗೆ ಬಾಂಬು ಸುರಿಸಿದ್ದೆಂದು ಇಸ್ರೇಲ್ ಸಮರ್ಥಿಸಿಕೊಂಡಿದ್ದು ಅದು ಗಾಝದ ನಿರಾಶ್ರಿತರ ಶಿಬಿರ, ಚರ್ಚ್ ಮಸೀದಿಗಳನ್ನು ಗುರಿಯಾಗಿಟ್ಟು ಬಾಂಬು ಸುರಿಸುತ್ತಿದೆ.

ಉತ್ತರ ಗಾಝದಿಂದ 20 ಆಸ್ಪತ್ರೆಗಳನ್ನು ತೆರವುಗೊಳಿಸಬೇಕೆಂದು ಇಸ್ರೇಲ್ ಹೇಳಿದೆ. ನೆರೆಯ ಲೆಬನಾನ್ ಸಿರಿಯಕ್ಕೂ ದಾಳಿ ವಿಸ್ತರಿಸಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಇರಾನಿನಿಂದ ಹಿಝ್ಬುಲ್ಲಾ ಮತ್ತು ಹಮಾಸ್‌ಗೆ ಆಯುಧಗಳು ಬರುತ್ತಿವೆ ಎಂದು ಆರೋಪಿಸಿದೆ.

ಡಮಸ್ಕಸ್ ಮತ್ತು ಅಲೆಪ್ಪೊದ ವಿಮಾನ ನಿಲ್ದಾಣದ ರನ್‌ವೆಗೆ ಇಸ್ರೇಲ್‌ನ ದಾಳಿ ನಂತರ ಸಿರಿಯ ವಿಮಾನ ಹಾರಾಟವನ್ನು ರದ್ದುಪಡಿಸಿತು. ದಾಳಿ ತೀವ್ರಗೊಳಿಸಲು ಹೊರಟ ಇಸ್ರೇಲ್ ಲೆಬನಾನ್ ಗಡಿಯ ಕಿರಾ ಶಮುನ ನಗರದಿಂದ 20,000ರಷ್ಟು ಜನರನ್ನು ಸ್ಥಳಾಂತರಿಸಿತು. ಪೂರ್ವ ಖಾನ್ ಯೂನಿಸ್‌ನಲ್ಲಿ ಇಸ್ರೇಲಿನ ಎರಡು ಬುಲ್ಡೋಝರ್ ಮತ್ತು ಒಂದು ಟ್ಯಾಂಕ್ ಅನ್ನು ವಶಪಡಿಸಿಕೊಂಡಿದ್ದೇವೆ ಎಂದು ಅಲ್ ಖಸ್ಸಾಂ ಬ್ರಿಗೆಡ್ ತಿಳಿಸಿದೆ.

ಅಲ್ ಖಸ್ಸಾಂ ಹಮಾಸ್‌ನ ಸೈನಿಕ ವಿಭಾಗವಾಗಿದೆ.