ಅತಿಕ್ರಮಿತ ವೆಸ್ಟ್‌ಬ್ಯಾಂಕ್‍ನಲ್ಲಿ ಇಸ್ರೇಲ್ ರಹಸ್ಯ ಕಾರ್ಯಾಚರಣೆ: ಮೂವರು ಫೆಲಸ್ತೀನಿಯರ ಹತ್ಯೆ

0
415

ಸನ್ಮಾರ್ಗ ವಾರ್ತೆ

ವೆಸ್ಟ್ ಬ್ಯಾಂಕ್: ಅತಿಕ್ರಮಿತ ವೆಸ್ಟ್ ಬ್ಯಾಂಕ್‍ನಲ್ಲಿ ಇಸ್ರೇಲಿನ ಸೇನೆ ರಹಸ್ಯ ದಾಳಿ ಮಾಡಿದ್ದು ಫೆಲಸ್ತೀನ್ ಅಥಾರಿಟಿಯ ಇಬ್ಬರು ಅಧಿಕಾರಿಗಳ ಸಹಿತ ಮೂವರನ್ನು ಗುಂಡಿಟ್ಟು ಹತ್ಯೆಯೆಸಗಿದೆ. ಒಬ್ಬರು ಗಾಯಗೊಂಡಿದ್ದಾರೆ. ವೆಸ್ಟ್ ಬ್ಯಾಂಕಿನ ಜೆನಿನ್ ನಗರದಲ್ಲಿ ಇಸ್ರೇಲಿನ ಸೈನಿಕಾಮ್ರಣ ರಹಸ್ಯವಾಗಿ ನಡೆದಿತ್ತು.

ಫೆಲಸ್ತೀನಿನ ಆರೋಗ್ಯ ಸಚಿವಾಲಯದ ಅಧಿಕಾರಿ ಆದಮ್ ಯಾಸರ್ ಅಲವಿ(23), ತಯ್ಸೀರ್ ಇಝ್ಝ(32) ಜಮೀಲ್ ಅಲ ಅಮಿರ ಅಸುನೀಗಿದ್ದಾರೆ ಎಂದು ಫೆಲಸ್ತೀನಿನ ಸುದ್ದಿ ಸಂಸ್ಥೆ ರಫಾ ವರದಿ ಮಾಡಿದೆ. ಗಂಭೀರ ಗಾಯಗೊಂಡ ಫೆಲಸ್ತೀನಿನ ಅಧಿಕಾರಿ ಮುಹಮ್ಮದ್ ಅಲ್ ಬಝಾರ(23)ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಯ ವೇಳೆ ವಿಝಾಂ ಅಬೂ ಝೈದ್ ಎಂಬ ಫೆಲಸ್ತೀನಿ ವ್ಯಕ್ತಿಯನ್ನು ಇಸ್ರೇಲಿನ ಸೇನೆ ಬಂಧಿಸಿದೆ ಎಂದು ವರದಿಯಾಗಿದೆ.

ಇಸ್ರೇಲಿನ ದಾಳಿಯನ್ನು ಫೆಲಸ್ತೀನಿನ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಖಂಡಿಸಿದರು.ಇಂತಹ ದಾಳಿಗಳನ್ನು ತಡೆಯಲು ಅಂತಾರಾಷ್ಟ್ರೀಯ ಸಮುದಾಯ ಮತ್ತು ಅಮೆರಿಕ ಮಧ್ಯಪ್ರವೇಶಿಸಬೇಕೆಂದು ಫೆಲಸ್ತೀನಿನ ಅಧ್ಯಕ್ಷರ ವಕ್ತಾರ ನಬಿಲ್ ಅಬೂ ರುದೈನ ಆಗ್ರಹಿಸಿದರು.