ಮ್ಯಾಜಿಸ್ಟ್ರೇಟರನ್ನು ಕೋರ್ಟಿನಲ್ಲಿ ಕೂಡಿಹಾಕಿದ ವಕೀಲರು

0
1199

ಸನ್ಮಾರ್ಗ ವಾರ್ತೆ-

ಕೇರಳ, ನ. 27: ವಂಚಿಯೂರ್ ಕೋರ್ಟಿನಲ್ಲಿ ಮ್ಯಾಜಿಸ್ಟ್ರೇಟ್ ಅನ್ನು ವಕೀಲರು ಚೇಂಬರಿನಲ್ಲಿ ಕೂಡಿಹಾಕಿದ ಘಟನೆ ನಡೆದಿದೆ. ಮ್ಯಾಜಿಸ್ಟ್ರೇಟ್ ದೀಪಾ ಮೋಹನ್‍ರನ್ನು ಚೇಂಬರ್ ನಲ್ಲಿ ಕೂಡಿಹಾಕಿದರು. ನಂತರ ಚೀಫ್ ಜ್ಯೂಡಿಶಿಯಲ್ ಮ್ಯಾಜಿಸ್ಟ್ರೇಟ್ ಬಂದು ಚೇಂಬರಿನಿಂದ ಬಿಡುಗಡೆಗೊಳಿಸಿದರು. ಕೆಎಸ್ಸಾರ್ಟಿಸಿ ಬಸ್ ಢಿಕ್ಕಿಯಾಗಿ ಮಹಿಳೆಗೆ ಗಾಯಗೊಂಡ ಪ್ರಕರಣದಲ್ಲಿ ವಿಚಾರಣೆಯ ವೇಳೆ ಕೋರ್ಟಿನಲ್ಲಿ ಹಾಜರಾಗಬಾರದೆಂದು ಚಾಲಕ ತನಗೆ ಬೆದರಿಕೆಯೊಡ್ಡಿದಾನೆ ಎಂದು ಗಾಯಗೊಂಡ ಮಹಿಳೆ ಕೋರ್ಟಿಗೆ ತಿಳಿಸಿದರು. ತದನಂತರ ಆರೋಪಿಯಾದ ಕೆಎಸ್ಸಾರ್ಟಿಸಿ ಚಾಲಕನ ಜಾಮೀನು ರದ್ದುಪಡಿಸಿ ನ್ಯಾಯಾಂಗ ಬಂಧನಕ್ಕೆ ಮ್ಯಾಜಿಸ್ಟ್ರೇಟ್ ಆದೇಶ ಹೊರಡಿಸಿದರು. ಇದನ್ನು ಪ್ರತಿಭಟಿಸಿ ವಕೀಲರು ಮ್ಯಾಜಿಸ್ಟ್ರೇಟ್‍ರನ್ನು ಚೇಂಬರಿನಲ್ಲಿ ಕೂಡಿಹಾಕಿದರು.

ಬಾರ್ ಅಸೋಸಿಯೇಶನ್ ಪದಾಧಿಕಾರಿಗಳ ನೇತೃತ್ವದಲ್ಲಿ ಈ ಘಟನೆ ನಡೆದಿದೆ. ನ್ಯಾಯಾಂಗ ಬಂಧನ ವಿಧಿಸಿದ ಆರೋಪಿಯನ್ನು ಬಿಡುಗಡೆಗೊಳಿಸಲು ವಕೀಲರು ಶ್ರಮಿಸಿದರೆಂದೂ ವರದಿಯಾಗಿದೆ. ಆದರೆ, ಆರೋಪಿಯನ್ನು ಬಿಡುಗಡೆಗೊಳಿಸಲು ಶ್ರಮಿಸಿಲ್ಲ ಎಂದು ಬಾರ್ ಅಸೋಸಿಯೇಶನ್ ಪದಾಧಿಕಾರಿಗಳು ಹೇಳಿದ್ದಾರೆ.