ಸನ್ಮಾರ್ಗ ವಾರ್ತೆ
ಮುಂಬೈ: ರಾಜಕೀಯ ಬಿಕ್ಕಟ್ಟಿನ ನಡುವೆ ಮಹಾರಾಷ್ಟ್ರ ಸರಕಾರವನ್ನು ಬೆಂಬಲಿಸುವ ಶಾಸಕರ ಸಭೆಯನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕರೆದಿದ್ದಾರೆ. ಉದ್ಧವ್ ತನ್ನ ಮನೆ ಮಾತೊಶ್ರೀಯಲ್ಲಿ ಹನ್ನೊಂದು ಗಂಟೆಗೆ ಸಭೆ ಕರೆದಿದ್ದಾರೆ.
ಮುಖ್ಯ ಮಂತ್ರಿ ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದು ಅವರು ಫೇಸ್ಬುಕ್ ಪೋಸ್ಟಿನಲ್ಲಿ ನಿನ್ನೆ ತಿಳಿಸಿದ್ದರು. ಇದೇ ವೇಳೆ ಭಿನ್ನಮತೀಯ ಶಾಸಕರನ್ನು ಅನರ್ಹಗೊಳಿಸಲು ಸುಪ್ರೀಂಕೋರ್ಟಿನಲ್ಲಿ ಕಾಂಗ್ರೆಸ್ ನಾಯಕ ಜಯ್ ಠಾಕೂರ್ ಅರ್ಜಿ ಸಲ್ಲಿಸಿದ್ದಾರೆ. ಭಿನ್ನಮತೀಯ ಶಾಸಕರು ಗುವಾಹಟಿಯಲ್ಲಿ ಶೀಘ್ರ ಸಭೆ ಸೇರಲು ನಿರ್ಧರಿಸಿದ್ದಾರೆ.
ಇನ್ನೂ ಮೂರು ಶಾಸಕರು ಭಿನ್ನಮತೀಯರ ಗುಂಪು ಸೇರಿದ್ದಾರೆ. ಇದರೊಂದಿಗೆ 44 ಶಾಸಕರ ಬೆಂಬಲವಿದೆ ಎಂದು ಭಿನ್ನಮತೀಯರು ಹೇಳಿಕೊಡಿದ್ದಾರೆ. 55 ಶಿವಸೇನೆ ಶಾಸಕರಲ್ಲಿ 34 ಮಂದಿ ತನ್ನನ್ನು ಬೆಂಬಲಿಸುತ್ತಿದ್ದಾರೆ. ಎಂದು ಶಿವಸೇನೆ ಸಚಿವ ಭಿನ್ನಮತೀಯ ನಾಯಕ ಏಕ್ನಾಥ್ ಶಿಂಧೆ ಹೇಳಿದ್ದಾರೆ. ಶಾಸಕರ ಬೆನ್ನಿಗೆ ಪಾರ್ಟಿ ಸಂಸದರು ಕೂಡ ಏಕ್ನಾಥ್ ಶಿಂಧೆಯವರೊಂದಿಗೆ ಚರ್ಚಿಸುತ್ತಿದ್ದಾರೆ ಎಂದು ಸೂಚನೆ ಲಭಿಸಿದೆ.
ಥಾಣೆ ಸಂಸದ ರಾಜನ್ ವಿಚಾರೆ, ಕಲ್ಯಾಣ್ ಸಂಸದ ಶಿಂಧೆಯ ಪುತ್ರ ಶ್ರೀಕಾಂತ್ ಶಿಂಧೆ ಭಿನ್ನಮತೀಯರ ಗುಂಪಿನಲ್ಲಿದ್ದಾರೆ. ಏಕ್ನಥ್ ಶಿಂಧೆ ಕೂಡಲೇ ಮಾಧ್ಯಮಗಳ ಮುಂದೆ ಬರುವ ಸೂಚನೆ ಇದೆ. ಉದ್ಧವ್ರ ವೀಡಿಯೊ ಸಂದೇಶಕ್ಕೆ ಉತ್ತರವಾಗಿ ಇಂದು ಅವರು ಮಾಧ್ಯಮಗಳನ್ನು ಭೇಟಿಯಾಗಲಿದ್ದಾರೆ ಎಂದು ಸೂಚನೆ ಲಭಿಸಿದೆ. ಗುವಾಟಿಯ ಫೈವ್ ಸ್ಟಾರ್ ಹೊಟೇಲಿನಲ್ಲಿ 24 ಗಂಟೆ ಕೇಂದ್ರ-ರಾಜ್ಯ ಸರಕಾರದ ಪೊಲೀಸರು ಸುರಕ್ಷೆ ಏರ್ಪಡಿಸಿದ್ದಾರೆ.