ಬ್ರಿಟನ್‍ನಲ್ಲಿ ರಷ್ಯಾದ ಹಸ್ತಕ್ಷೇಪ: ವರದಿ ಬಹಿರಂಗ ಪಡಿಸದಿರುವುದು ನಾಚಿಕೆಗೇಡು- ಹಿಲರಿ ಕ್ಲಿಂಟನ್ ಆರೋಪ

0
426

ಸನ್ಮಾರ್ಗ ವಾರ್ತೆ

ಲಂಡನ್,ನ.13:ಬ್ರಿಟಿಷ್ ರಾಜಕೀಯದಲ್ಲಿ ರಷ್ಯಾದ ಹಸ್ತಕ್ಷೇಪ ನಡೆದಿದೆ ಎಂಬ ಆರೋಪದಲ್ಲಿ ಸರಕಾರ ತನಿಖಾ ವರದಿ ಬಹಿರಂಗಗೊಳಿಸದಿರುವುದು ಲಜ್ಜಾರ್ಹ ಎಂದು ಅಮೆರಿಕದ ಮಾಜಿ ವಿದೇಶ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಆರೋಪಿಸಿದ್ದಾರೆ.

ಡಿಸೆಂಬರ್ 12ರವರೆಗೆ ವರದಿ ಬಿಡುಗಡೆಗೊಳಿಸುವುದಿಲ್ಲ ಎಂದು ಬ್ರಿಟನ್ ಹೇಳಿತ್ತು. ಚುನಾವಣೆ ನಡೆಯುವ ವೇಳೆ ಏನು ಆಗುತ್ತಿದೆ ಎಂದು ಬ್ರಿಟನ್‍ನ ಪ್ರತಿಯೊಬ್ಬ ಮತದಾರರಿಗೂ ತಿಳಿಯುವ ಹಕ್ಕಿದೆ ಎಂದು ಹಿಲರಿ ಬೆಟ್ಟು ಮಾಡಿದರು.

ಬ್ರಿಟನ್‍ನ ರಷ್ಯನ್ ಹಸ್ತಕ್ಷೇಪದ ಕುರಿತು ಪಾರ್ಲಿಮೆಂಟಿನ ಇಂಟಲಿಜೆನ್ಸ್ ಆಂಡ್ ಸೆಕ್ಯುರಿಟಿ ಕಮಿಟಿ ತನಿಖೆ ನಡೆಸಿದೆ. ತನಿಖೆ ಮಾರ್ಚ್‍ನಲ್ಲಿ ಪೂರ್ತಿಯಾಗಿ ವರದಿಯನ್ನು ಅಕ್ಟೋಬರ್‌ನಲ್ಲಿ ಪಾರ್ಲಿಮೆಂಟ್‍ಗೆ ಹಸ್ತಾಂತರಿಸಲಾಗಿತ್ತು.