ಯಾವ ತೀರ್ಪು ಬರುವುದು ನನಗೆ ಗೊತ್ತಿಲ್ಲ, ಆದರೆ ಬಾಬರಿ ಮಸೀದಿ ಕೆಡವಿದ್ದು ಕಾನೂನಿನ ಅಪಹಾಸ್ಯವಾಗಿದೆ- ಅಸದುದ್ದೀನ್ ಉವೈಸಿ

0
879

ಸನ್ಮಾರ್ಗ‌ ವಾರ್ತೆ

ಹೈದರಾಬಾದ್: ಅಯೋಧ್ಯೆಯ ರಾಮ ಮಂದಿರ ಬಾಬರಿ ಮಸೀದಿ ಪ್ರಕರಣದಲ್ಲಿ ಎಲ್ಲವೂ ಸುಪ್ರೀಂಕೋರ್ಟಿನ ತೀರ್ಪಿನ ಮೇಲೆ ಅವಲಂಬಿಸಿದೆ. ನವೆಂಬರ್ ಹದಿನೈದರಂದು ತೀರ್ಪು ಬರಬಹುದು. ತನಗೆ ಯಾವ ರೀತಿ ತೀರ್ಪು ಬರಬಹುದು ಎಂದು ಗೊತ್ತಿಲ್ಲ. ಆದರೆ ತೀರ್ಪಿನಿಂದ ಕಾನೂನಿನ ಕೈಗಳು ಗಟ್ಟಿಗೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ಎಂಐಎಂಐಎಂ ಮುಖಂಡ ಅಸದುದ್ದೀನ್ ಉವೈಸಿ ಹೇಳಿದರು.

1992ರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ್ದು ಕಾನೂನಿನ ಅಪಹಾಸ್ಯವಾಗಿದೆ ಎಂದು ಅವರು ಹೇಳಿದರು. ಉವೈಸಿಯ ಭಾಷಣವನ್ನು ಎಂಐಎಂಐಎಂ ಪಾರ್ಟಿ ಟ್ವಿಟರ್ ಹ್ಯಾಂಡಲಿನಲ್ಲಿ ಪೋಸ್ಟ್ ಮಾಡಿದೆ.

1986ರಲ್ಲಿ ಬಾಬರಿ ಮಸೀದಿ ಬೀಗ ತೆರೆದಾಗ ಕಾಂಗ್ರೆಸ್ ಸರಕಾರಿ ಇತ್ತು. ಮಸೀದಿ ಕೆಡವಲ್ಪಟ್ಟಾಗ ಯಾರು ಸಚಿವರಿದ್ದರು ಮತ್ತು ಬೀಗ ತೆರೆದು ಕೊಡುವಾಗ ಯಾರ ಸರಕಾರ ಇತ್ತು. ಈ ವಿಷಯವನ್ನು ನೀವು ನೆನಪಿಟ್ಟುಕೊಳ್ಳಬೇಕೆಂದು ನೆರೆದ ಜನರ ಮುಂದೆ ಅವರು ಹೇಳಿದರು. ಜೊತೆಗೆ ಈ ತೀರ್ಪಿನಲ್ಲಿ ದೇಶದ ನ್ಯಾಯವನ್ನು ಎತ್ತಿಹಿಡಿಯುವಂತಾಗಲಿ ಎಂದು ಪ್ರಾರ್ಥಿಸಲು ಉವೈಸಿ ಕರೆ ನೀಡಿದರು.