ಉದ್ಯೋಗ ಸುಧಾರಣಾ ಕಾನೂನಿಗೆ ಮುಂದಾದ ಕತರ್

0
636

ಸನ್ಮಾರ್ಗ ವಾರ್ತೆ

ದೋಹ,ಅ.19:ಕಾರ್ಮಿಕರನ್ನು ಕೆಲಸದ ಮಾಲಕನಿಗೆ ಜೋಡಿಸುವ ವ್ಯವಸ್ಥೆಯಲ್ಲಿ ಕತರ್ ಸುಧಾರಣೆ ತರುತ್ತಿದೆ. ಕಾರ್ಮಿಕರು ದೇಶದಿಂದ ಹೋಗಬೇಕಾದರೆ ಕೆಲಸ ಮಾಡುವ ಕಂಪೆನಿಯ ಅನುಮತಿ ಪಡೆಯುವುದು ಅಗತ್ಯವಾಗಿದೆ.

ದೇಶದ ಉದ್ಯೋಗ ಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಸರಕಾರ ಬಂದಿದೆ. ಈ ಮೂಲಕ ಕಾರ್ಮಿಕರ ಕ್ಷೇಮಕ್ಕಾಗಿ ಈ ಯೋಜನೆಗೆ ಅದು ಮುಂದಾಗಿದ್ದು ಇದಕ್ಕೆ ಕಾನೂನು ರಚಿಸಲಾಗುವುದು ಎಂದು ಬುಧವಾರ ಕತರ್ ಪ್ರಧಾನಿ ಅಬ್ದುಲ್ಲ ಬಿನ್ ನಾಸಿರ ಬಿನ್ ಖಲೀಫ ಅಲ್ಥಾನಿ ಟ್ವೀಟ್ ಮಾಡಿದರು. ಕಾರ್ಮಿಕರಿಗೆ ಸಂಬಂಧಿಸಿದ ಹಕ್ಕುಗಳ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಸರಕಾರದ ಉದ್ದೇಶ ಎಂದು ಅಲ್‍ಥಾನಿ ಹೇಳಿದರು.

2022ರಲ್ಲಿ ಫಿಫ ವಿಶ್ವಕಪ್ ಕತರ್‍‌ನಲ್ಲಿ ನಡೆಯಲಿದೆ. ಕತರ್ ವಿಶ್ವಕಪ್ ಅತಿಥೇಯತ್ವವನ್ನು ಯಶಸ್ವಿಗೊಳಿಸುವ ಉದ್ದೇಶದಲ್ಲಿ ನಿರತವಾಗಿದೆ. ಆದ್ದರಿಂದ ಉದ್ಯೋಗ ಕ್ಷೇತ್ರದ ಸಮಸ್ಯೆ ಬಗೆಹರಿಸುವುದಕ್ಕಾಗಿ ಹೊಸ ನಿರ್ಧಾರಕ್ಕೆ ಸರಕಾರ ಬಂದಿದೆ. 5000 ಕಾರ್ಮಿಕರಿಗೆ ಸಂಬಳ ಸಿಗದೆ ತಡವಾಗಿದ್ದು ಅವರು ಬೀದಿಗಿಳಿದಿದ್ದರು. ಕಾರ್ಮಿಕರು ಉದ್ಯೋಗ ದಾತರ ನಡುವಿನ ಅಸಾಮರಸ್ಯಕ್ಕೆ ಇದು ಆಸ್ಪದವಾಗಿತ್ತು.