ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ದಿಲ್ಲಿಯಲ್ಲಿ ಪುನಃ ವಾಯು ಮಾಲಿನ್ಯ ಗಂಭೀರವಾಗಿದ್ದು ಶುಕ್ರವಾರ ಅದು ತೀವ್ರವಾಗಿದೆ. ನಗರದ ಏರ್ ಕ್ವಾಲಿಟಿ ಇಂಡಕ್ಸ್ ಬೆಳಗಾತ ಎಂಟು ಗಂಟೆಗೆ 401ಕ್ಕೆ ತಲುಪಿತ್ತು.
ಎಲ್ಲ ದಿನವೂ ಸಂಜೆ ನಾಲ್ಕಕ್ಕೆ ದಾಖಲಾಗುವ 24 ಗಂಟೆ ಸರಾಸರಿ ಇಂಡಕ್ಸ್ ನಲ್ಲಿ ಗುರುವಾರ 390 ಐಕ್ಯೂಐ, ಬುಧವಾರ 394 ಐಕ್ಯೂಐ, ಮಂಗಳವಾರ 365, ಸೋಮವಾರ 348, ರವಿವಾರ 301 ಐಕ್ಯೂಐ ತಲುಪಿತ್ತು.
ನೆರೆಯ ಗಾಝಿಯಾಬಾದಿನಲ್ಲಿ 386, ಗುರುಗ್ರಾಮದಲ್ಲಿ 321, ಗ್ರೇಟರ್ ನೊಯಿಡದಲ್ಲಿ 345, ನೊಯಿಡದಲ್ಲಿ 344 ಫರಿದಾಬಾದಿನಲ್ಲಿ 410 ವಾಯು ಮಾಲಿನ್ಯದ ಐಕ್ಯೂಐ ಆಗಿತ್ತು.
ಸೊನ್ನೆಯಿಂದ ಐವತ್ತರ ವರೆಗೆ ವಾಯು ಮಟ್ಟ ಉತ್ತಮವಾಗಿರುತ್ತದೆ. 51ರಿಂದ 100ರವರೆಗೆ ತೃಪ್ತಿಕರ, 101ರಿಂದ 200 ಮಧ್ಯಮ, 201ರಿಂದ 300 ಕೆಟ್ಟದ್ದು, 301ರಿಂದ 400 ತುಂಬಾ ಕೆಟ್ಟದ್ದು, 401ರಿಂದ 500ಕ್ಕೆ ತಲುಪಿದರೆ ಅದು ಗಂಭೀರ ಎಂದು ಐಕ್ಯೂಐ ಲೆಕ್ಕವಾಗಿದೆ.
ಪುಣೆಯ ಇನ್ಸಿಟಿಟ್ಯೂಟ್ ಆಫ್ ಟ್ರಾಪ್ಪಿಕಲ್ ಮೆಟಿರೀಯೊಲಜಿ ಈ ವಾಯು ಅಳೆಯುವ ವ್ಯವಸ್ಥೆಯನ್ನು ತಂದಿದೆ. ಇದರ ಪ್ರಕಾರ ಐದಾರು ದಿನಗಳಲ್ಲಿ ವಾಯು ಮಾಲಿನ್ಯ ಇನ್ನೂ ಹೆಚ್ಚಲಿದೆ.












