ಸನ್ಮಾರ್ಗ ವಾರ್ತೆ
ಜುಬೈಲ್: ಕಳೆದ 35 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೃಷ್ಣಾಪುರದಲ್ಲಿ ನ್ಯೂ ಫ್ರೆಂಡ್ಸ್ ಸರ್ಕಲ್ ಅನ್ನುವ ಯುವಕರ ಸಂಸ್ಥೆ ಸಮಾಜ ಸೇವೆಯಲ್ಲಿ ತೊಡಗಿದ್ದು ಅದರ ಎನ್ ಆರ್ ಐ ಶಾಖೆಯ ವಾರ್ಷಿಕ ಸಭೆ ಜುಬೈಲ್ ನಲ್ಲಿ ನಡೆಯಿತು.

ಸಮಾಜ ಸೇವೆ, ಮೆಡಿಕಲ್ ಕ್ಯಾಂಪ್, ವಿದ್ಯಾರ್ಥಿಗಳಿಗೆ ನೆರವು ಇತ್ಯಾದಿ ಸಮಾಜ ಹಿತ ಕೆಲಸಗಳನ್ನು ನಿರ್ವಹಿಸುತ್ತಾ ಜನಮನ್ನಣೆ ಗಳಿಸಿರುವ ಈ ಯುವಕರ ಜುಬೈಲ್ ಶಾಖೆಯ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಜುಬೈಲ್ ಶಾಖೆಯ ಅಧ್ಯಕ್ಷರಾಗಿ ಮೊಹಮ್ಮದ್ ಅನೀಸ್, ಉಪಾಧ್ಯಕ್ಷರಾಗಿ ಫಝಲ್ ರಬ್ಬಿ, ಕಾರ್ಯದರ್ಶಿಯಾಗಿ ಶಕೀಲ್ ಮತ್ತು ಜತೆ ಕಾರ್ಯದರ್ಶಿಯಾಗಿ ಸರ್ಫರಾಜ್ ಮುನ್ನ ಆಯ್ಕೆಯಾದರು. ಸಲಹೆಗಾರರಾಗಿ ನೈನಾರ್ ಆಸಿಫ್ ಆಯ್ಕೆಯಾದರು ಎಂದು ಪ್ರಕಟಣೆ ತಿಳಿಸಿದೆ.












