ಅಖಿಲೇಶ್ ಯಾದವ್ ಚುನಾವಣಾ ಸಮಯದಲ್ಲಿ ಮಾತ್ರ ಸಕ್ರಿಯರಾಗಿರುತ್ತಾರೆ: ಪ್ರಿಯಾಂಕಾ ಗಾಂಧಿ ಆರೋಪ

0
206

ಸನ್ಮಾರ್ಗ ವಾರ್ತೆ

ಮೊರಾದಾಬಾದ್: ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್‌ರವರು ಚುನಾವಣೆಯ ಸಮಯದಲ್ಲಿ ಮಾತ್ರ ಸಕ್ರಿಯರಾಗುತ್ತಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಆರೋಪಿಸಿದರು.

2020ರ ಪೌರತ್ವ ತಿದ್ದುಪಡಿ ಕಾನೂನು ವೇಳೆ ಪ್ರತಿಭಟನೆ ದಾಳಿ ನಡೆದಾಗ ಅವರು ಎಲ್ಲಿದ್ದರು ಎಂದು ಪ್ರಿಯಾಂಕ ಕೇಳಿದರು. ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತಾಡುತ್ತಿದ್ದರು.

ಬಿಜೆಪಿ ಜಾತಿ-ಧರ್ಮ ರಾಜಕೀಯವನ್ನೇ ಎಸ್‍ಪಿ, ಬಿಎಸ್‍ಪಿ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಇಂತಹ ರಾಜಕೀಯದಿಂದ ವೋಟು ಗಳಿಸಿ ಗೆದ್ದು ಅಧಿಕಾರ ಹಿಡಿಯಬಹುದು ಎಂದು ಅವರು ನಂಬಿದ್ದಾರೆ. ಸಮಾಜದ ಧ್ರುವೀಕರಣ ಉಂಟು ಮಾಡಿ ಬಿಜೆಪಿ ಪುನಃ ಗೆಲ್ಲುತ್ತದೆ ಎಂದು ಕೆಲವರು ಹೇಳುವುದನ್ನು ಕೇಳಿಧದೇನೆ. ಅಷ್ಟೇ ಯಾಕೆ, ಪ್ರಧಾನ ಪ್ರತಿಪಕ್ಷ ಎಂದು ಗಣನೆಗೊಂಡಿರುವ ಪಾರ್ಟಿಗಳು ಕೂಡ ಅಭಿವೃದ್ಧಿ ಅಜೆಂಡ ತೀರ್ಮಾನಿಸವುದಿಲ್ಲ ಎಂಬುದು ಸತ್ಯವಾಗಿದೆ ಎಂದರು. ಅವರು ಕಾಂಗ್ರೆಸ್ಸಿನ ಪ್ರತಿಜ್ಞಾ ರ್ಯಾಲಿಯಲ್ಲಿ ಮಾತಾಡುತ್ತಿದ್ದರು.

ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಬಿಜ್ನೋರಿನ 19 ವರ್ಷದ ಯುವಕನ ಹತ್ಯೆಯಾಯಿತು. ಇನ್ನೊಬ್ಬರು ಪೊಲೀಸರು ಗುಂಡಿಗೆ ಕೊಲ್ಲಲ್ಪಟ್ಟು. ಇದರಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಿಯಾಂಕ ಹೇಳಿದರು.

ಅಖೀಲೇಶ್‌ಜೀ ಅವರ ಮನೆಗೆ ಭೇಟಿಕೊಟ್ಟರೇ ಎಂದು ಕೇಳ ಬಯಸುತ್ತೇನೆ. ಸೋನಭದ್ರಾದಲ್ಲಿ ಹದಿಮೂರು ಮಂದಿ ಆದಿವಾಸಿಗಳು ಕೊಲ್ಲಲ್ಪಟ್ಟರು. ಅಖಿಲೇಶ್ ಅಲ್ಲಿ ಹೋದರೇ? ಉನ್ನಾವ, ಹಾಥ್ರಸ್‍ನಲ್ಲಿ ಮಹಿಳೆಯರ ಮೇಲೆ ಅಕ್ರಮ ನಡೆಯಿತು. ಅಖಿಲೇಶ್ ಅಲ್ಲಿ ಹೋದರೇ? ರೈತರ ಹತ್ಯೆಯಾದ ಲಖೀಂಪುರಕ್ಕೆ ಅವರು ಹೋದರೇ? ಚುನಾವಣೆಯ ಸಮಯ ಬಂದಾಗ ಅವರು ಮತ್ತು ಅವರ ಪಾರ್ಟಿ ಸಮಾಜವಾದಿ ಆಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. ಆಗ್ರಾ, ಅಲಹಾಬಾದ್, ಹಾಥ್ರಸ್‍ಗಳಲ್ಲಿ ದಲಿತರ ವಿರುದ್ಧ ದಾಳಿ ನಡೆಯುವಾಗ ಎಸ್‍ಪಿ, ಬಿಎಸ್‍ಪಿ ನಾಯಕರು ಮೌನವಹಿಸಿದ್ದರು ಎಂದು ಪ್ರಿಯಾಂಕಾ ಆರೋಪಿಸಿದರು.