ಗುಜರಾತ್ ಗಲಭೆಯ ಕುರಿತು ಕೇಳಲಾದ ಪ್ರಶ್ನೆಗೆ ಕ್ಷಮೆ ಯಾಚಿಸಿದ ಸಿಬಿಎಸ್‍ಇ

0
42

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಹನ್ನೆರಡನೆ ತರಗತಿ ಫಸ್ಟ್ ಟೈಮ್ ಪರೀಕ್ಷೆಯ ಸಮಾಜ ವಿಜ್ಞಾನ ಗುಜರಾತ್ ಗಲಭೆಯ ಪ್ರಶ್ನೆ ಕೇಳಿರುವುದಕ್ಕೆ ಸಿಬಿಎಸ್‍ಇ ಕ್ಷಮೆ ಯಾಚಿಸಿದೆ. 2002ರಲ್ಲಿ ಗುಜರಾತ್ ಮುಸ್ಲಿಂ ವಿರೋಧಿ ದಂಗೆ ಯಾವ ಸರಕಾರದ ಅವಧಿಯಲ್ಲಿ ನಡೆದಿತ್ತು ಎಂದು ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿತ್ತು. ಕಾಂಗ್ರೆಸ್, ಬಿಜೆಪಿ, ಡೆಮಕ್ರಾಟಿಕ್, ರಿಪಬ್ಲಿಕ್ ಎಂದು ಆಯ್ಕೆಯನ್ನೂ ನೀಡಲಾಗಿತ್ತು. ಹತ್ತನೆ ತರಗತಿ ಮತ್ತು 12ನೇ ತರಗತಿ ಸಿಬಿಎಸ್‍ಇ ಬೋರ್ಡ್ ಪರೀಕ್ಷೆಗಳು ನಡೆಯುತ್ತಿವೆ. ಬುಧವಾರ ಸಿಬಿಎಸ್‍ಇ ಹನ್ನೆರಡನೇ ತರಗತಿಯ ಮೊದಲ ಪರೀಕ್ಷೆ ನಡೆದಿತ್ತು. ಕೊರೋನದ ಕಾರಣದಿಂದ ಎರಡು ಹಂತದಲ್ಲಿ ಸಿಬಿಎಸ್‍ಇ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಪರೀಕ್ಷೆಯ ಪ್ರಶ್ನೆ ಸಿಬಿಎಸ್‍ಇಯ ಮಾರ್ಗಸೂಚಿಗೆ ವಿರುದ್ಧ ಅನುಚಿತ ಎಂದು ಸಿಬಿಎಸ್‍ಇ ತಿಳಿಸಿದ್ದು ಇದಕ್ಕೆ ಹೊಣೆಗಾರರಾದವರ ವಿರುದ್ಧ ಕ್ರಮ ಜರಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಸಿಲಬಸ್‍ನಿಂದ ಹೊರಗಿರುವ ಪ್ರಶ್ನೆಯನ್ನು ಪರೀಕ್ಷೆಗೆ ಕೇಳಿಲ್ಲ ಎಂದು ಸಾಮಾಜಿಕ ಮಾಧ್ಯಮಗಳ ಸಹಿತ ಹಲವರು ರಂಗ ಪ್ರವೇಶಿಸಿದರು. ಪಾಠ ಪುಸ್ತಕದ ಪ್ರಶ್ನೆಗೆ ಕ್ಷಮೆ ಕೇಳುವುದು ಯಾಕೆ ಎಂದು ಅವರು ಹೇಳುತ್ತಾರೆ. ಅವರು ಪಾಠ ಪುಸ್ತಕದ ಭಾಗವನ್ನು ಶೇರ್ ಮಾಡಿದ್ದಾರೆ. ಸಮಾಜ ವಿಜ್ಞಾನದ ಪುಟ 141ರಲ್ಲಿ ಬಿಜೆಪಿ ಸರಕಾರ ಗುಜರಾತ್‍ನಲ್ಲಿರುವಾಗ ಗಲಭೆ ಆಗಿತೆಂದು ಅದರಲ್ಲಿ ಸ್ಪಷ್ಟವಾಗಿದೆ. ಇದ ಹನ್ನೆರಡನೆ ತರಗತಿಯ ಪಾಠ ಪುಸ್ತಕದ ಭಾಗವಾಗಿತ್ತು.