ಅಲ್‍ ಜಝೀರ ಡಾಕ್ಯುಮೆಂಟರಿಗೂ ಭಾರತದಲ್ಲಿ ನಿಷೇಧ

0
130

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ. 16: ಆಲಾಹಾಬಾದ್ ಹೈಕೋರ್ಟು ಭಾರತದಲ್ಲಿ ಹೆದರಿಕೆ ವಾತಾವರಣವನ್ನು ತೆರೆದು ತೋರಿಸುವ ಇಂಡಿಯ… ಹು ಲಿಟ್ ದಿ ಫ್ಯುಸ್ ಎಂಬ ಡಾಕ್ಯುಮೆಂಟರಿ ಪ್ರದರ್ಶನಕ್ಕೆ ನಿಷೇಧ ಹೇರಿದೆ.

ಈ ಮೂಲಕ ಬಿಬಿಸಿ ಡಾಕ್ಯುಮೆಂಟರಿ ನಿಷೇಧ ನಂತರ ಅಲ್ ಜಝೀರದ ಇಂಡಿಯ ಹು ಲಿಟ್ ದಿ ಫ್ಯೂಸ್‍ ಡಾಕ್ಯುಮೆಂಟರಿಗೂ ನಿಷೇಧ ಬಿದ್ದಂತಾಗಿದೆ.

ಸುಧೀರ್ ಕುಮಾರ್ ಎಂಬವರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಜಸ್ಟಿಸ್ ಅಶ್ವಿನಿ ಕುಮಾರ್ ಮಿಶ್ರ , ಜಸ್ಟಿಸ್ ಅಶುತೋಷ್ ಶ್ರೀವಾಸ್ತವರ ಪೀಠ ನಿಷೇಧ ಹೇರಿದೆ.

ಸಮಾಜದಲ್ಲಿ ವಿವಿಧ ವಿಭಾಗಗಳಲ್ಲಿ ಪರಸ್ಪರ ದ್ವೇಷಕ್ಕೆ ಕಾರಣವಾಗಬಹುದು. ದೇಶದ ಜಾತ್ಯತೀತ ವ್ಯವಸ್ಥೆಗೆ ಹಾನಿ ಸಂಭವಿಸಬಹುದು ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಅಲ್ ಜಝೀರಾ ಒಂದು ಮಾಧ್ಯಮ ಸಂಸ್ಥೆ ಮಾತ್ರ ಆಗಿದ್ದು ಡಾಕ್ಯುಮೆಂಟರಿ ಪ್ರಸಾರ ಮಾಡಿ ತನ್ನ ವ್ಯಾಪ್ತಿಯನ್ನು ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ಬೊಟ್ಟು ಮಾಡಲಾಗಿತ್ತು.

ಭಾರತದಲ್ಲಿ ಮುಸ್ಲಿಮರು ಅಲ್ಪ ಸಂಖ್ಯಾತರು. ಅವರು ಭಯದಿಂದ ಜೀವಿಸುತ್ತಿದ್ದಾರೆಂಬುದು ಸತ್ಯಕ್ಕೆ ದೂರವಾದ ಮಾತು. ಇಂತಹ ಸುಳ್ಳುಗಳನ್ನು ಹೇಳಿ ದ್ವೇಷ ಸೃಷ್ಟಿಸಲು ಡಾಕ್ಯುಮೆಂಟರಿ ಶ್ರಮಿಸುತ್ತಿದೆ. ವಿವಿಧ ಧರ್ಮ ವಿಭಾಗಗಳಿರುವ ಭಾರತದ ಪ್ರಜೆಗಳ ನಡುವೆ ಅಸಾಮರಸ್ಯ ಸೃಷ್ಟಿಸಲು ವಿಷಯವನ್ನು ತಿರುಚಲಾಗಿದೆ. ಭಾರತದ ಸರಕಾರ ಅಲ್ಪಸಂಖ್ಯಾತರ ಹಿತಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಚಿತ್ರೀಕರಿಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಮುದ್ರಣ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ ಈ ವಿವರ ತನಗೆ ಸಿಕ್ಕಿತೆಂದು ಕೂಡ ಅರ್ಜಿದಾರ ತಿಳಿಸಿದ್ದಾರೆ.

ಡಾಕ್ಯುಮೆಂಟರಿ ಅಧಿಕಾರಿಗಳು ಪರಿಶೀಲನೆ ಮಾಡುವವರೆಗೆ ಪ್ರಸಾರ ಮಾಡಬಾರದು ಇದಕ್ಕೆ ಕೇಂದ್ರ ಸರಕಾರ ಉಚಿತ ಕ್ರಮ ಕೈಗೊಳ್ಳಬೇಕೆಂದು ಕೋರ್ಟು ಸೂಚಿಸಿತು. ಸಾಮಾಜಿ ಒಗ್ಗಟ್ಟು ಖಚಿತ ಪಡಿಸಲು ಭಾರತದ ಸುರಕ್ಷೆ ಮತ್ತು ಹಿತಾಸಕ್ತಿ ರಕ್ಷಿಸಲು ಕೇಂದ್ರ -ರಾಜ್ಯ ಸರಕಾರಗಳಿಗೆ ನ್ಯಾಯಾಲಯ ಮನವಿ ಮಾಡಿದೆ.

2002ರ ಗುಜರಾತ್ ದಂಗೆಯಲ್ಲಿ ಮೋದಿಯ ನೇರ ಪಾತ್ರ ಇದೆ ಎಂದಿರುವ ಬಿಬಿಸಿ ಡಾಕ್ಯುಮೆಂಟರಿಗೂ ನಿಷೇಧ ಹೇರಲಾಗಿತ್ತು. 2023 ಜನವರಿಯಲ್ಲಿ ಬಿಡುಗೊಂಡ ಡಾಕ್ಯುಮೆಂಟರಿ ಸಾಮಾಜಿ ಮಾಧ್ಯಮಗಳಲ್ಲಿ ಶೇರ್ ಮಾಡುವುದನ್ನು ಸರಕಾರ ತಡೆದಿತ್ತು. ಆದರೆ ವಿವಿಧ ಸಂಘಟನೆಗಳು ಡಾಕ್ಯುಮೆಂಟರಿ ಬಹಿರಂಗ ಪ್ರದರ್ಶನವನ್ನು ಏರ್ಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.