ಸನ್ಮಾರ್ಗ ವಾರ್ತೆ
ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಮತ್ತು ವಸತಿ ಇಲಾಖೆ ಸಚಿವರಾದ ಜಮೀರ್ ಅಹ್ಮದ್ ಖಾನ್ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹ್ಮದ್ ಅವರನ್ನು ಎಸ್.ಐ.ಓ ಕರ್ನಾಟಕ ನಿಯೋಗವು ವಿಧಾನ ಸೌಧದಲ್ಲಿ ಭೇಟಿ ಮಾಡಿ ಜುಲೈ ನಲ್ಲಿ ಮಂಡಿಸಲಿರುವ ಬಜೆಟ್ ಕುರಿತು ಕೆಲವು ಪ್ರಸ್ತಾವನೆಯನ್ನು ಸಲ್ಲಿಸಿತು.
ಮುಂಬರುವ 2023-24ರ ಮಧ್ಯಂತರ ವಾರ್ಷಿಕ ರಾಜ್ಯ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗಾಗಿ ಈ ಹಿಂದೆ ಜಾರಿಗೊಂಡಿದ್ದ ಎಲ್ಲಾ ಶಿಕ್ಷಣ ಸಂಬಂಧಿತ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಹಂಚಿಕೆ ಮಾಡಲು ಮತ್ತು ಇಲಾಖೆಯ ಶೈಕ್ಷಣಿಕ ಯೋಜನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಆಗ್ರಹಿಸಲಾಯಿತು.
ನಿಯೋಗವನ್ನು ರಾಜ್ಯ ಕಾರ್ಯದರ್ಶಿಗಳಾದ ಮಹಮ್ಮದ್ ಪೀರ್ ಲಟಗೇರಿ ಮತ್ತು ಅಫ್ವಾನ್ ಹೂಡೆ ಪ್ರತಿನಿಧಿಸಿದ್ದರು.












