ಸನ್ಮಾರ್ಗ ವಾರ್ತೆ
ಕೋಝಿಕ್ಕೋಡ್, ಎ. 28: ಕೊರೊನಾ ಕಾಲದ ರಮಝಾನ್ ಸಮೃದ್ಧಿಯ ಉಪವಾಸದ ನೆನಪುಗಳು ಆಲಿಕೋಯ ಹಂಚುತ್ತಾರೆ. ವಿಧವಿಧದ ಆಹಾರವಸ್ತು, ತರಕಾರಿಗಳನ್ನು ಒಂದು ವಾರ ಮೊದಲೇ ತರವಾಡಿನ ಯಜಮಾನರ ನೇತೃತ್ವದಲ್ಲಿ ಸಂಗ್ರಹಿಸಿಡಲಾಗುತ್ತಿತ್ತು. ಉಪವಾಸ ತೆರೆಯುವುದು, ಸಹ್ರಿ ಉಣ್ಣುವುದು ಎಲ್ಲವೂ ವಿಧವಿಧದ ಆಹಾರಗಳಿಂದ ಆಗಿಬಿಡುತ್ತಿತ್ತು. ತರವಾಡಿನ ವಿವಿಧ ಭಾಗಗಳಲ್ಲಿ ಮಧ್ಯಾಹ್ನದ ನಂತರ ಆಹಾರದ ಸಿದ್ಧತೆ ಆರಂಭ.
ಯುವತಿಯರು ಸಹಾಯ ಮಾಡಲು ಬರುವರು. ಮಗ್ರಿಬ್ ಅದಾನ್ಗೆ ಕೊಡಲು ಕಾಯುತ್ತಾ ಮಕ್ಕಳು ತರವಾಡ್ ಅಂಗಳದಲ್ಲಿ ಇರುತ್ತಾರೆ. ಅವರಿಗೆ ಪಟಾಕಿ ಸಿಡಿಸಿ, ದೊಡ್ಡ ಸದ್ದು ಮಾಡಿ ಉಪವಾಸ ತೆರೆಯಲು ಸಮಯ ಆಗಿದ್ದನ್ನು ತಿಳಿಸುವರು. ಸಮೂಸ, ಕಲ್ತಪ್ಪ ಅಂದಿನ ಉನ್ನತ ಆಹಾರ ವೈವಿಧ್ಯಗಳು. ರಾತ್ರೆಯೂಟಕ್ಕೆ (ಮುತ್ತಾಳ) ಚೀರೆ ಗಂಜಿ, ರೊಟ್ಟಿ ಮುಂತಾದವು ಇರುತ್ತಿದ್ದವು. ರಮಝಾನ್ 20 ಆದ ಬಳಿಕ ಬೆಸ ರಾತ್ರೆಗಳಲ್ಲಿ ಮಸೀದಿ ವ್ಯವಸ್ಥಾಪಕರು, ಇಮಾಮ್ ಅದಾನ್ ಕೊಡುವ ಮುಅದ್ದಿನ್ ಒಟ್ಟಿಗೆ ಮಸೀದಿಯಲ್ಲಿ ಸೇರುತ್ತಾರೆ. ಅದಕ್ಕೆ ತಮಾಶೆ ಎಂದು ಹೆಸರಿತ್ತು.
ಅಲ್ಲಿ ಆಟವಿತ್ತು. ಎಲ್ಲ ದಿನವೂ ಸಹರಿಯ ಸಮಯವನ್ನು ತಿಳಿಸಲು ಡಂಗುರ ಬಾರಿಸಿ ತಿಳಿಸಲಾಗುತ್ತಿತ್ತು. ಚಂದ್ರೋದಯ ವಾದರೆ, ಈದ್ ಬಂದರೆ ಇದೇ ರೀತಿ ಡಂಗುರ ಬಾರಿಸಲಾಗುತ್ತಿತ್ತು. ಇಂದಿನಂತೆ ಸಮಾಜ ಸೇವೆಯವರು ಇರಲಿಲ್ಲ ಎಂದು ಆಲಿಕೋಯ ಹೇಳುತ್ತಾರೆ. ಉಪವಾಸದಲ್ಲಿ ಮುಸ್ಲಿಮರ ಹೋಟೆಲುಗಳು ತೆರೆಯುವುದಿಲ್ಲ. ಒಂದುವೇಳೆ ತೆರೆದರೂ ಅಂಗಡಿಯೊಳಗೆ ಆಹಾರ ಸೇವಿಸಲು ಬಂದವರನ್ನು ಚೆಂಡೆ ಬಡಿದು ಕೂಗುಹಾಕಿ ರಸ್ತೆಯಲ್ಲಿ ನಿಲ್ಲಿಸಲಾಗುವುದು ಎಂದು ಅಲಿಕ್ಕೋಯ ಹೇಳುತ್ತಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












