ದಂಪತಿಗಳಿಗೆ ಕೊರೊನಾ : ಹಡಗಿನಿಂದ ಹೊರಗಿಳಿಯದ 7000 ಮಂದಿ

0
1162

ಸನ್ಮಾರ್ಗ ವಾರ್ತೆ

ರೋಂ, ಜ. 31: ಪ್ರಯಾಣಿಕ ದಂಪತಿಗಳಲ್ಲಿ ಕೊರೊನಾ ಲಕ್ಷಣ ಕಂಡು ಬಂದಿದ್ದರಿಂದ ಹಡಗಿನಿಂದ ಹೊರಬರಲಾಗದೆ 7000 ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ. ಕೋಸ್ಟ್ ಸ್ಮೆರಾಲ್ಡ್ ಎಂಬ ಹಡಗಿನ ಪ್ರಯಾಣಿಕರಿಗೆ ಈ ಕಷ್ಟ ಬಂದಿದೆ. ಅವರಿಗೆ ಹಡಗಿನಿಂದ ಹೊರಬರಲು ಅನುಮತಿ ನೀಡಲಾಗಿಲ್ಲ. ಇಟಲಿಯ ರೋಮ್ ಬಳಿಯ ಬಂದರಿನಲ್ಲಿ ಹಡಗು ಡಂಗುರ ಹಾಕಿ ನಿಂತಿದೆ. ಹಡಗಿನ ಪ್ರಯಾಣಿಕರಲ್ಲಿ ಹಾಂಕಾಂಗಿನಿಂದ ಬಂದ 54 ವರ್ಷದ ಮಹಿಳೆ ಮತ್ತು ಅವರ ಪತಿಗೆ ಜ್ವರ ಬಂದಿದೆ. ನಂತರ ಇವರನ್ನು ಕೊರೊನ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಹಡಗು ಕಂಪೆನಿ ತಿಳಿಸಿದೆ. ಇವರನ್ನು ಹಡಗಿನ ವಿಶೇಷ ಕೋಣೆಯಲ್ಲಿ ಇರಿಸಲಾಗಿದೆ. ಮೆಡಿಟರೇನಿಯನ್ ಪ್ರಯಾಣದ ಭಾಗವಾಗಿ ಸ್ಪೈನಿನಲ್ಲಿ ಹಡಗು ಹೊರಟಿತ್ತು.

ತಪಾಸಣೆಯಲ್ಲಿ ಇಬ್ಬರಿಗೂ ಕೊರೊನೊ ಇಲ್ಲ ಎಂದು ದೃಢಪಟ್ಟರೆ ಮಾತ್ರ ಇತರ ಪ್ರಯಾಣಿಕರನನು ಇಟಲಿಯಲ್ಲಿ ಇಳಿಯಲು ಅನುಮತಿಸಲಾಗುವುದು. ಈವರೆಗೆ ಯಾರೂ ಹಡಗಿನಿಂದ ಹೊರಬಂದಿಲ್ಲ. ಬರಬಾರದೆಂದು ಸೂಚನೆ ನೀಡಲಾಗಿದೆ.