ಪಾಕ್ ಪರ ಘೋಷಣೆ ಆರೋಪ | ಮೂವರನ್ನು ಬಂಧಿಸಿದ ವಿಧಾನಸೌಧ ಪೊಲೀಸರು

0
674

ಸನ್ಮಾರ್ಗ ವಾರ್ತೆ

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನ ಮಾಡಿರುವುದಾಗಿ ವಿಧಾನಸೌಧ ಪೊಲೀಸರು ಮಾಹಿತಿ ನೀಡಿದ್ದಾರೆ.

ಇಲ್ತಾಝ್, ಮುನವ್ವರ್, ಮೊಹಮ್ಮದ್ ನಾಶಿಪುಡಿ ಬಂಧಿತರು ಎಂದು ಮಾಹಿತಿ ನೀಡಿರುವ ವಿಧಾನಸೌಧ ಠಾಣೆಯ ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ನಿವಾಸಿ ಮೊಹಮ್ಮದ್ ಶಫಿ ನಾಶಿಪುಡಿ, ಆರ್‌.ಟಿ.ನಗರದ ನಿವಾಸಿ ಮುನವ್ವರ್, ದೆಹಲಿ ಮೂಲದ ಇಲ್ತಾಜ್‌ ಎಂದು ಗುರುತಿಸಲಾಗಿದೆ.

ಎಫ್‌ಎಸ್ಎಲ್ ವರದಿ, ಸಾಂಧರ್ಬಿಕ ಸಾಕ್ಷ್ಯಾಧಾರಗಳು, ಸಾಕ್ಷಿಗಳ ಹೇಳಿಕೆ ಮತ್ತು ಲಭ್ಯ ಸಾಕ್ಷಾಧಾರಗಳ ಮೇರೆಗೆ ಮೂರು ಜನ ಆರೋಪಿಗಳನ್ನು ಬಂಧಿಸಿ, ಅವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗಿರುತ್ತದೆ ಎಂದು ಬೆಂಗಳೂರು ನಗರದ ಕೇಂದ್ರ ವಿಭಾಗದ ಡಿಸಿಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ನಾಸಿರ್ ಹುಸೇನ್ ಗೆಲುವು ಸಾಧಿಸಿದ್ದರು. ಗೆದ್ದ ಖುಷಿಯಲ್ಲಿ ನಾಸಿರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಜಿಂದಾಬಾದ್ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.