ಕುವೈಟ್‍ನಲ್ಲಿ ಒಬ್ಬ ಭಾರತೀಯನಿಗೆ ಕೊರೊನಾ

0
1350

ಸನ್ಮಾರ್ಗ ವಾರ್ತೆ

ಕುವೈಟ್ ಸಿಟಿ, ಮಾ. 21: ಕುವೈಟ್‍ನಲ್ಲಿ ಕೊರೊನಾ ಪೀಡಿತ ಭಾರತೀಯರ ಸಂಖ್ಯೆ ಎರಡಕ್ಕೇರಿಕೆಯಾಗಿದ್ದು ಬ್ರಿಟನ್‍ನಿಂದ ಬಂದಿದ್ದ ಕುವೈಟ್ ಪ್ರಜೆಯ ಸಂಪರ್ಕಕ್ಕೆ ಬಂದ ಭಾರತೀಯನಿಗೆ ಶನಿವಾರ ಕೊರೊನಾ ದೃಢಪಟ್ಟಿದೆ. ಈ ಹಿಂದೆ ಅಝರ್‍ಬೈಜಾನ್‍ನಿಂದ ಬಂದಿದ್ದ ಈಜಿಪ್ಟ್ ಪ್ರಜೆಯೊಂದಿಗೆ ಸಂಬಂಧ ಹೊಂದಿದ್ದ ತಮಿಳ್ನಾಡಿನ ವ್ಯಕ್ತಿಗೆ ವೈರಸ್ ದೃಢಪಟ್ಟಿತ್ತು. ಶನಿವಾರ ವೈರಸ್ ದೃಢಪಟ್ಟವರಲ್ಲಿ ನಾಲ್ವರು ಬ್ರಿಟನ್‍ನಿಂದ ಬಂದರು.

ಇವರಲ್ಲಿ ಮೂವರು ಕುವೈಟಿಗರು. ಒಬ್ಬ ಲೆಬನಾನ್ ಪ್ರಜೆ. ಇನ್ನೊಬ್ಬ ಯುಎಇಯಿಂದ ಬಂದ ಕುವೈಟ್ ಪ್ರಜೆಯಾಗಿದ್ದಾನೆ. ಮೂವರೂ ಸ್ವಿಟ್ಝರ್‍ಲೆಂಡಿನಿಂದ ಬಂದವರು. ಕುವೈಟ್, ಲೆಬನಾನ್, ಸೋಮಾಲಿಯ ದೇಶದ ಪ್ರಜೆಗಳೂ ಇದ್ದಾರೆ. ಎಂಟು ಮಂದಿ ಬ್ರಿಟನ್‍ನಿಂದ ಬಂದವರ ಸಂಪರ್ಕಕ್ಕೆ ಬಂದು ಕೊರೊನಾ ತಗಲಿಸಿಕೊಂಡಿದ್ದಾರೆ. ಇವರಲ್ಲಿ ನಾಲ್ವರು ಕುವೈಟಿ ಪ್ರಜೆಗಳು. ಒಬ್ಬ ಭಾರತೀಯ, ಇಬ್ಬರು ಫಿಲಿಪ್ಪೀನ್ಸ್ ಮನೆ ಕೆಲಸದಾಳುಗಳು. ಒಬ್ಬ ಈಜಿಪ್ಟ್ ಪ್ರಜೆಯಾಗಿದ್ದಾನೆ.