ಅವಿಜ್ಞಾನಿ ಅವರ ಅನಾಮಧೇಯ ಗೀರುಗಳು ಕೃತಿಗೆ ಈ ಹೊತ್ತಿಗೆ ಕಾವ್ಯ ಪ್ರಶಸ್ತಿ ಪ್ರದಾನ

0
253

ಸನ್ಮಾರ್ಗ ವಾರ್ತೆ

ನಿಝಾಮ್ ಗೋಳಿಪಡ್ಪು ಅವರ ‘ಅನಾಮಧೇಯ ಗೀರುಗಳು’ ಕವನಸಂಕಲನ, ಸದಾಶಿವ ಸೊರಟೂರ ಅವರ ‘ಧ್ಯಾನಕ್ಕೆ ಕೂತ ನದಿ’ ಕಥಾ ಸಂಕಲನಕ್ಕೆ 2024ನೇ ಸಾಲಿನ ಈ ಹೊತ್ತಿಗೆ ಕಥಾ ಪ್ರಶಸ್ತಿ ಮತ್ತು ಈ ಹೊತ್ತಿಗೆ ಕಾವ್ಯಪ್ರಶಸ್ತಿ ಲಭಿಸಿದೆ.

ಜಯನಗರದ ಕಪ್ಪಣ್ಣ ಅಂಗಳದಲ್ಲಿ ಭಾನುವಾರ ನಡೆದ ಈ ಹೊತ್ತಿಗೆ ಸಂಸ್ಥೆಯ ವಾರ್ಷಿಕ ಹೊನಲು ಕಾರ್ಯಕ್ರಮ ಮತ್ತು ಈ ಹೊತ್ತಿಗೆ ಕಥಾ ಮತ್ತು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಪತ್ರಕರ್ತೆ ರಶ್ಮಿ.ಎಸ್, ಪ್ರಶಸ್ತಿ ಪುರಸ್ಕೃತರ ಸಾಹಿತ್ಯದಲ್ಲಿ ಓದುಗರ ಎದೆಯಲ್ಲಿರಬೇಕಾದ ಆರ್ದ್ರತೆ ಮತ್ತು ವಿಶಿಷ್ಟವಾದ ಭಾಷಾ ಬಳಕೆ, ರೂಪಕ, ಪ್ರತಿಮೆಗಳನ್ನು ತಮ್ಮ ಬರಹಗಳಲ್ಲಿ ಕಾಣಿಸುವ ಗುಣ ತಮಗೆ ತುಂಬಾ ಇಷ್ಟವಾಗಿದೆ ಎಂದು ಬಣ್ಣಿಸಿದರು.

ಕವಿ ನಿಝಾಮ್ ಅವರು ಮಾತನಾಡಿ “ನನ್ನೊಳಗಿನ ನೋವು ಕವಿತೆಗಳಾಗಿ ಹೊರ ಹೊಮ್ಮುತ್ತದೆ” ಎಂದು ಹೇಳಿದರು.

ಪತ್ರಕರ್ತೆ ವಿದ್ಯಾರಶ್ಮಿ ಮಾತನಾಡಿ, ಬದುಕಿನಲ್ಲಿ ಅನಿರೀಕ್ಷಿತವಾಗಿ ಬಂದೆರಗುವ ಸಾಮಾನ್ಯ ಸಂಗತಿಗಳಲ್ಲಿ ಸಾಹಿತ್ಯದ ಬೀಜಗಳಿರುತ್ತವೆ ಎಂದು ಹೇಳಿದರು.

ಇದೇ ವೇಳೆ ವಿಮರ್ಶಕಿ ಡಾ.ಎಂ.ಎಸ್.ಆಶಾ ದೇವಿ ಅವರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ದೇವು ಪತ್ತಾರ್, ಸರ್ವಮಂಗಳಾ ಮೋಹನ್, ಸಂಗೀತಾ, ಗೀತಾ ಕುಂದಾಪುರ, ಕುಸುಮಾ ಹೆಗಡೆ, ವೀರೇಶ್, ಜಯಲಕ್ಷ್ಮಿ ಪಾಟೀಲ್, ಇಂದಿರಾ ಶರಣ್, ಆನಂದ ಕುಂಚನೂರ, ಮಧು ವೈ. ಎನ್., ಇಂದಿರಾ ಶರಣ್, ಸಿಂಧುರಾವ್, ರೇಣುಕಾ ಕೋಡಗುಂಟಿ, ಮತ್ತಿತರರು ಉಪಸ್ಥಿತರಿದ್ದರು.