ಹನಿಯ್ಯ ಇರಾನಿಗೆ; ಯುದ್ಧ ವಿರಾಮ ಅಂತಾರಾಷ್ಟ್ರೀಯ ಕಾನೂನು ವಿರುದ್ಧವಲ್ಲ- ಗುಟರೆಸ್

0
246

ಸನ್ಮಾರ್ಗ ವಾರ್ತೆ

ಟೆಹ್ರಾನ್: ಹಮಾಸ್ ಪೊಲಿಟಿಕಲ್ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಇರಾನ್‌ಗೆ ಭೇಟಿ ನೀಡಿದ್ದಾರೆ. ಅವರು ಇರಾನ್‌ನ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಪ್ರೆಸ್ ಟಿವಿ ವರದಿ ಮಾಡಿದೆ.

ಯುಎನ್ ಸೆಕ್ಯುರಿಟಿ ಕೌನ್ಸಿಲ್ ಕದನ ವಿರಾಮ ಮತ್ತು ಗಾಜಾದಲ್ಲಿ ಒತ್ತೆಯಾಳುಗಳ ಬಿಡುಗಡೆಗೆ ಕರೆ ನೀಡುವ ನಿರ್ಣಯವನ್ನು ಅಂಗೀಕರಿಸಿದ ಕೆಲವೇ ದಿನಗಳ ಬಳಿಕ ಹನಿಯಾ ಅವರ ಭೇಟಿ ನೀಡುತ್ತಿದ್ದಾರೆ.

ಏತನ್ಮಧ್ಯೆ, ನಿರ್ಣಯದ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಜಗಳವಾಡಿವೆ. ಯುದ್ಧದ ಆರಂಭದಿಂದಲೂ ಇಸ್ರೇಲ್ ಅನ್ನು ರಕ್ಷಿಸುತ್ತಿರುವ ಯುನೈಟೆಡ್ ಸ್ಟೇಟ್ಸ್ ಈ ಬಾರಿ ವೀಟೋ ಮಾಡದೆ ಮತದಾನದಿಂದ ದೂರ ಉಳಿದಿದೆ. ಇದರ ವಿರುದ್ಧ ಇಸ್ರೇಲ್ ತೀವ್ರ ಅಸಮಾಧಾನ ಹೊರಹಾಕಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವು ಅಂತರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ ಎಂಬ US ಆರೋಪವನ್ನು ಯುಎನ್ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಅವರ ವಕ್ತಾರರು ತಿರಸ್ಕರಿಸಿದ್ದಾರೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ರಫಾ ಮೇಲೆ ದಾಳಿ ನಡೆಸಲು ಇಸ್ರೇಲ್ ನಡೆಸುತ್ತಿರುವ ಕ್ರಮದ ವಿರುದ್ಧ ಹರಿಹಾಯ್ದಿದ್ದಾರೆ. ಬ್ಲಿಂಕೆನ್ ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರಿಗೆ ರಾಫಾ ಮೇಲೆ ನೆಲದ ದಾಳಿಯಿಲ್ಲದೆ ಪರ್ಯಾಯ ಮಾರ್ಗವನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಇದೇ ವೇಳೆ ಗಾಜಾದಲ್ಲಿ ಇಸ್ರೇಲ್ ದಾಳಿ 172ನೇ ದಿನವೂ ಮುಂದುವರಿದಿದೆ. ಇಸ್ರೇಲಿ ಪಡೆಗಳು ರಫಾದಲ್ಲಿ ಮನೆಯ ಮೇಲೆ ಬಾಂಬ್ ದಾಳಿ ನಡೆಸಿದಾಗ ನಾಲ್ಕು ಮಕ್ಕಳು ಸೇರಿದಂತೆ 15 ಜನರು ಸಾವನ್ನಪ್ಪಿದರು. ಇಸ್ರೇಲಿನ ಅಕ್ರಮ ವಲಸಿಗರು ಹೆಬ್ರಾನಿನ ಉತ್ತರ ಬೈತ್ತು ಉಮರ್ ನಗರವನ್ನು ಆಕ್ರಮಿಸಿದ್ದು ವೆಸ್ಟ್ ಬ್ಯಾಂಕಿನಿಂದ ಇಂದು ಎಂಟು ಮಂದಿಯನ್ನು ಇಸ್ರೇಲ್ ಸೇನೆ ಅಪಹರಿಸಿದೆ.