ದಿಲ್ಲಿ ಗಲಭೆ ವೇಳೆ ಕಾಣೆಯಾದ ಇಂಟಲಿಜೆನ್ಸ್ ಅಧಿಕಾರಿಯ ಮೃತದೇಹ ಕೊಳಚೆಗುಂಡಿಯಲ್ಲಿ ಪತ್ತೆ

0
1025

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 26: ದಿಲ್ಲಿಯ ಗಲಭೆಯ ವೇಳೆ ಕಾಣೆಯಾದ ಇಂಟಲಿಜೆನ್ಸ್ ಅಧಿಕಾರಿಯ ಮೃತದೇಹ ಕೊಳಚೆಗುಂಡಿಯಲ್ಲಿ ಪತ್ತೆಯಾಗಿದ್ದು ಇಂಟಲಿಜೆನ್ಸ್ ಅಧಿಕಾರಿ ಅಂಕಿತ್ ಶರ್ಮರ ಮೃತದೇಹ ಬುಧವಾರ ಬೆಳಗೆ ಪತ್ತೆಯಾಗಿದ್ದೆಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಸಂಜೆಯಿಂದ ಅವರು ಕಾಣೆಯಾಗಿದ್ದರು.

ಐಬಿಯಲ್ಲಿ ಸೆಕ್ಯುರಿಟಿ ಅಸಿಸ್ಟೆಂಟ್ ಆಗಿ ಅಂಕಿತ್ ಶರ್ಮ ಕೆಲಸ ಮಾಡುತ್ತಿದ್ದರು. ಅಂಕಿತ್‍ರ ಮನೆಯಿದ್ದ ಖಜೂರಿ ಏರಿಯಕ್ಕೆ ಕಳೆದ ದಿವಸ ಗಲಭೆಕೋರರು ಕಲ್ಲೆಸೆದಿದ್ದರು. ನಂತರ ಕುಟುಂಬ ಅಂಕಿತ್‍ಗೆ ಫೋನ್ ಕರೆ ಮಾಡಿತ್ತು. ಮನೆಗೆ ಬರುವ ದಾರಿಯಲ್ಲಿ ಒಂದು ಗುಂಪು ಅವರನ್ನು ಅಪಹರಿಸಿಕೊಂಡು ಹೋಗಿತ್ತೆಂದು ಪೊಲೀಸರು ಹೇಳುತ್ತಿದ್ದಾರೆ.

ಅಂಕಿತ್‍ರ ತಂದೆ ಐಬಿಯಲ್ಲಿದ್ದಾರೆ. ಅಂಕಿತ್‍ಗೆ ಹೊಡೆದ ಬಳಿಕ ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.