ತಮಿಳುನಾಡಿನಲ್ಲಿ ಅವಧಿಗಿಂತ ಮೊದಲು ಚುನಾವಣೆ ನಡೆಸಲು ಆಡಳಿತ ಪಕ್ಷ‌ ಒತ್ತಾಯ

0
495

ಸನ್ಮಾರ್ಗ ವಾರ್ತೆ

ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಅವಧಿಗಿಂತ ಮೊದಲು ನಡೆಸಲು ಆಡಳಿತ ಪಕ್ಷದಿಂದ ಬಲವಾದ ಒತ್ತಾಯ ಕೇಳಿಬಂದಿದೆ.

ಕೇಂದ್ರ ಚುನಾವಣಾ ಆಯೋಗ ಸೋಮವಾರ ಚೆನ್ನೈಯಲ್ಲಿ ಕರೆದ ಅಂಗೀಕೃತ ರಾಜಕೀಯ ಪಕ್ಷಗಳ ಸಭೆಯಲ್ಲಿ ಅಣ್ಣಾಡಿಎಂಕೆ ಈ ಬೇಡಿಕೆಯನ್ನು ಇಟ್ಟಿದ್ದು, ಮೇ 24ಕ್ಕೆ ತಮಿಳ್ನಾಡಿನಲ್ಲಿ ವಿಧಾನಸಭೆಯ ಕಾಲಾವಧಿ ಮುಗಿಯುತ್ತದೆ. ಬೇಸಗೆ ಉಷ್ಣತೆಯನ್ನು ಪರಿಗಣಿಸಿ ಮೇ ತಿಂಗಳಲ್ಲಿ ಚುನಾವಣೆ ನಡೆಸಬಾರದು ಎಪ್ರಿಲ್‍ನ ಮೂರನೇ ವಾರದಲ್ಲಿ ಚುನಾವಣೆ ನಡೆಸಬೇಕೆಂದು ಅಣ್ಣಾ ಡಿಎಂಕೆ ಸೂಚಿಸಿದೆ.

ರಾಜ್ಯದ ಚುನಾವಣಾ ಆಯೋಗ ಇದೇ ನಿಲುವನ್ನು ಹೊಂದಿದ್ದು, ಇಡೀ ರಾಜ್ಯದಲ್ಲಿ ಒಂದೇ ದಿನ ಚುನಾವಣೆ ನಡೆಸಬೇಕೆಂದು ಡಿಎಂಕೆ ಆಗ್ರಹಿಸಿತು. ವಿಶೇಷ ಪರಿಸ್ಥಿತಿಯಲ್ಲಿ ರಾಜ್ಯದ ಮುಖ್ಯ ರಾಜಕೀಯ ಪಾರ್ಟಿಗಳು ಪ್ರಚಾರ ಆರಂಭಿಸಿದೆ. ಮುಖ್ಯ ಪ್ರತಿಪಕ್ಷ ಡಿಎಂಕೆ ವಿ ರಿಜಕ್ಟ್ ಎಡಿಎಂಕೆ, ಮಿಶನ್200 ಎಂಬ ಘೋಷಣೆಯೊಂದಿಗೆ ಪ್ರಚಾರ ರಂಗಕ್ಕಿಳಿದಿದೆ.

ಇದೇ ವೇಳೇ ಪೊಂಗಲ್ ವೇಳೆ ಪ್ರತಿಯೊಂದು ರೇಷನ್ ಕಾರ್ಡಿಗೆ 2,500 ರೂಪಾಯಿಯಂತೆ ಹಣ ನೀಡುವುದಾಗಿ ಅಣ್ಣಾ ಡಿಎಂಕೆ ಸರಕಾರ ಘೋಷಿಸಿದೆ.

ಡಿಸೆಂಬರ್ 27ಕ್ಕೆ ಚೆನ್ನೈಯಲ್ಲಿ ಎಡಿಎಂಕೆ ಪ್ರಚಾರ ಸಮ್ಮೇಳನಕ್ಕೆ ಚಾಲನೆ ನೀಡಲಿದೆ. ಬಿಜೆಪಿಯೊಂದಿಗೆ ಸಂಬಂಧ ಕಟ್ಟಿಕೊಂಡಿರುವುದರಿಂದ ಅದಕ್ಕೆ ಅಲ್ಪಸಂಖ್ಯಾತರ ನಷ್ಟವಾಗದಿರಲು ಯೋಜನೆಯನ್ನು ರೂಪಿಸುತ್ತಿದೆ.

ಕ್ರೈಸ್ತರಿಗೆ ಜೆರುಸಲೇಂ ಪ್ರವಾಸಕ್ಕೆ ಸರಕಾರದ ಧನಸಹಾಯ 20,000 ರೂಪಾಯಿಯಿಂದ 37,000 ರೂಪಾಯಿಗೇರಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಮಕ್ಕಳ್ ನೀತಿ ಮಯ್ಯಂ ಅಧ್ಯಕ್ಷ ಕಮಲ್ ಹಾಸನ್ ಎರಡು ವಾರದ ಹಿಂದೆ ಮಧುರೆಯಿಂದ ಜಾಥಾ ಆರಂಭಿಸಿದ್ದಾರೆ. ಅವರ ಪಾರ್ಟಿಯ ಏಳು ಅಂಶ ಕಾರ್ಯಕ್ರಮವನ್ನು ಅವರು ಸೋಮವಾರ ಘೋಷಿಸಿದ್ದಾರೆ. ಆಮ್ ಆದ್ಮಿ ಸಹಿತ ವಿವಿಧ ಪ್ರಾದೇಶಿಕ ಸಂಘಟನೆಗಳನ್ನು ಸೇರಿಸಿ ಒಕ್ಕೂಟ ರೂಪಿಸಲು ಕಮಲ್ ಹಾಸನ್ ಶ್ರಮ ಆರಂಭಿಸಿದ್ದಾರೆ.