6 ರಿಂದ 8 ತಿಂಗಳೊಳಗೆ ಹೊಸ ಕೊರೋನ ಅಲೆ ಬರಲಿದೆ: ಎಚ್ಚರಿಕೆ ನೀಡಿದ ತಜ್ಞರು

0
208

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದಲ್ಲಿ ಕೊರೋನ ಸುದ್ದಿಗಳು ಕಡಿಮೆಯಾಗುತ್ತಿದೆ. ಈ ಮಧ್ಯೆ ಮುಂದಿನ ಆರರಿಂದ ಎಂಟು ತಿಂಗಳೊಳಗೆ ಹೊಸ ಕೊರೋನ ಅಲೆ ಬರಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಆರರಿಂದ ಎಂಟು ತಿಂಗಳ ಕೊರೋನ ಹರಡುವ ಸಾಧ್ಯತೆ ಇದೆ. ಕೊರೋನದ ಹೊಸ ರೂಪಾಂತರ ಈ ಕೊರೋನ ಅಲೆಗೆ ಕಾರಣವಾಗುವುದು ಎಂದು ಐಎಂಎ ಕೊರೋನ ಟಾಸ್ಕ್ ಫೋರ್ಸಿನ ಸಹ ಚೇರ್‍ಮೆನ್ ಡಾ.ರಾಜೀವ್ ಜಯದೇವನ್ ಎಎನ್‍ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ಹಿಂದೆ ಹರಡಿದ್ದ ಒಮಿಕ್ರಾನ್ ಬಿಎ.2 ರೂಪಾಂತರ ಹೆಚ್ಚು ಹರಡುವಿಕೆ ಸಾಮರ್ಥ್ಯ ಹೊಂದಿರುವುದು. ಆದರೆ ಮುಂದಿನ ಇನ್ನೊಂದು ರೂಪಾಂತರದಿಂದ ಕೊರೋನ ವ್ಯಾಪಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ವೈರಸ್ ಈಗ ನಮ್ಮ ನಡುವೆ ಇರಬಹುದು. ಕೆಲ ಸಮಯ ತೀವ್ರವೂ ಕೆಲ ಸಮಯ ಕಡಿಮೆಯೂ ಆಗುತ್ತದೆ. ಮುಂದಿನ ವೇರಿಯಂಟ್ ತೀವ್ರವಾಗುವ ಸಾಧ್ಯತೆ ಇದೆ. ಅದು ಯಾವಾಗ ಎಂದು ಖಚಿತವಾಗಿ ಹೇಳಬರುವುದಿಲ್ಲ. ಆದರೆ ಅದು ಆಗೇ ಬಿಡುತ್ತದೆ ಎನ್ನುವುದನ್ನು ಇತಿಹಾಸ ತಿಳಿಸುತ್ತದೆ. ಆರರಿಂದ ಎಂಟು ತಿಂಗಳ ನಡುವೆ ಅದು ಹರಡಬಹುದು ಎಂದು ಡಾ. ರಾಜೀವ್ ಜಯದೇವನ್ ಹೇಳಿದರು.

ಒಮಿಕ್ರಾನ್‍ನಂತೆ ಮುಂದಿನ ಕೊರೋನ ಅಲೆಯನ್ನು ಪ್ರತಿರೋಧಿಸುವ ಶಕ್ತಿ ವ್ಯಾಕ್ಸಿನ್‍ಗಿದೆ. ಇತರ ರೂಪಾಂತರಗಳಂತೆ ಮುಂದಿನ ರೂಪಾಂತರದಲ್ಲಿಯೂ ವ್ಯತ್ಯಾಸಗಳಿರಬಹುದು. ರೋಗ ಬರುವುದರಿಂದ ಸಿಕ್ಕಿದ ಪ್ರತಿರೋಧ ಶಕ್ತಿ. ಅಥವಾ ವ್ಯಾಕ್ಸಿನ್‍ನಿಂದ ಸಿಕ್ಕಿದ ಪ್ರತಿರೋಧ ಶಕ್ತಿಯಿಂದ ಹೊಸ ಅಲೆಯನ್ನೂ ಪ್ರತಿರೋಧಿಸಲು ಸಾಧ್ಯವಿದೆ ಎಂದು ಅವರು ತಿಳಿಸಿದರು.