ಆನ್ ಲೈನ್ ಗೇಮ್‍ಗಳಿಗೆ ಮಾಡಿದ್ದ ಸಾಲ ಮರಳಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಯುವಕ

0
203

ಸನ್ಮಾರ್ಗ ವಾರ್ತೆ

ಇಂದೋರ್: ದೇಶದಲ್ಲಿ ಆನ್ ಲೈನ್ ಗೇಮ್ ನ ಚಟ ಯುವಕರಲ್ಲಿ ಹೆಚ್ಚಾಗುತ್ತಲೇ ಇದೆ. ಇದರಿಂದ ಲಾಭಕ್ಕಿಂತ ಹೆಚ್ಚು ನಷ್ಟಗಳೇ ಸಂಭವಿಸುತ್ತಿವೆ. ಈ ಮಧ್ಯೆ ಮಧ್ಯಪ್ರದೇಶದ ಇಂದೋರಿನಲ್ಲಿ ಆನ್ ಲೈನ್ ಗೇಮ್ ಆಡಲಿಕ್ಕಾಗಿ ಮಾಡಿದ್ದ ಸಾಲವನ್ನು ಮರಳಿಸಲಾಗದೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

25 ವರ್ಷದ ಯುವಕ ಜಿತೇಂದ್ರ ವಾಸ್ಕ್‍ಲೆ ಸಾಲ ಮರುಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಯುವಕ. ಕಂಪ್ಯೂಟರ್ ಅಪ್ಲಿಕೇಶನ್‍ನಲ್ಲಿ ಪೋಸ್ಟ್ ಗ್ರಾಜುವೇಟ್ ಡಿಪ್ಲೊಮಾ ವಿದ್ಯಾರ್ಥಿಯೂ ಆಗಿದ್ದ ಈತ, ತಾನಿದ್ದ ಹಾಸ್ಟೆಲಲ್ಲಿ ನೇಣುಹಾಕಿಕೊಂಡು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೊಡ್ಡ ಬಹುಮಾನದ ಕೊಡುಗೆಯೊಂದಿಗೆ ಕೆಲವು ಗೇಮ್‍ಗಳಿದ್ದು ಅದನ್ನು ಗೆಲ್ಲುವ ಉದ್ದೇಶದಿಂದ ಸಾಲ ಮಾಡಿದ್ದೇನೆ. ಅದನ್ನು ನನ್ನಿಂದ ಮರುಕಳಿಸಲು ಸಾಧ್ಯವಾಗುತ್ತಿಲ್ಲ. ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟ ಪತ್ರದಲ್ಲಿ ತಿಳಿಸಿದ್ದಾನೆ ಎಂದು ವರದಿಯಾಗಿದೆ.

ಯುವಕ ಆನ್‍ಲೈನ್ ಗೇಮ್‍ನಲ್ಲಿ ಚಟಕ್ಕೆ ಬಿದ್ದು ಹಣವನ್ನು ಸಾಲ ಪಡೆದಿದ್ದ. ಆದರೆ ಗೇಮ್ ನಿಂದಾಗಿ ಸಂಪೂರ್ಣ ಹಣ ಕಳಕೊಂಡಿದ್ದ. ಪಡೆದಿದ್ದ ಸಾಲ ಮರಳಿಸಲು ಅವನಿಂದಾಗಿಲ್ಲ. ಆದರೆ ಯಾರಿಂದ ಎಷ್ಟು ಸಾಲದ ಮೊತ್ತ ಪಡೆದಿದ್ದೇನೆ ಎಂದು ಆತ ಪತ್ರದಲ್ಲಿ ಬರೆದಿಲ್ಲ ಎಂದು ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ ರಾಮ್ ಪ್ರಸಾದ್  ಮಾಳವೀಯ  ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಜಿತೇಂದ್ರ ರವರ ತಂದೆ- ತಾಯಿ ಮಹಾರಾಷ್ಟ್ರದಲ್ಲಿ ಕೆಲಸದಲ್ಲಿದ್ದು ಮೃತದೇಹವನ್ನು ಮನೆಗೆ ಕೊಂಡು ಹೋಗುವ ಸಿದ್ಧತೆ ಪೂರ್ಣಗೊಂಡಿದೆ ಎಂದು ಸಬ್ ಇನ್ಸ್‍ಪೆಕ್ಟರ್ ತಿಳಿಸಿದರು.

ವಿಶೇಷ ಸೂಚನೆ: ನಿಮಗೇನಾದರೂ ಮಾನಸಿಕವಾದ ಸಮಸ್ಯೆ ಇದ್ದಲ್ಲಿ ಅಥವಾ ಬೆಂಬಲ ಬೇಕಾದರೆ ಅಥವಾ ಯಾರಲ್ಲಾದರೂ ತಿಳಿಸಲು ಇಚ್ಛೆಯಿದ್ದರೆ ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ.