ಪರೀಕ್ಷಾ ಕೇಂದ್ರಗಳ ಹೊರಗೆ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಪರೀಕ್ಷೆ: ಸಿಎಂ ಚೌಹಾಣ್‌ಗೆ ಪತ್ರ

0
677

ಸನ್ಮಾರ್ಗ ವಾರ್ತೆ

ಇಂದೋರ್,ಜೂ.12: ಮಧ್ಯಪ್ರದೇಶದ ಶಿಕ್ಷಣ ಸಂಸ್ಥೆಯೊಂದರಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳನ್ನು ಪರಿಕ್ಷಾ ಹಾಲ್ ನಿಂದ ಹೊರಗಡೆ ಕುಳ್ಳಿರಿಸಿ ಪರೀಕ್ಷೆಗೆ ಬರೆಯಿಸಿರುವ ಘಟನೆ ನಡೆದಿರುವುದನ್ನು ಖಂಡಿಸಿ, ಈ ಬಗ್ಗೆ ಸ್ಥಳೀಯ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್‍ರವರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರವರಿಗೆ ಪತ್ರ ಬರೆದಿದ್ದಾರೆ.

ಇಂದೋರ್‍ನ ನೌಲಖಾದ ಬಂಗಾಳಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿತ್ತು. ಈ ಶಾಲೆಯು 12ನೇ ತರಗತಿಯ ಪರೀಕ್ಷಾ ಕೆಂದ್ರವಾಗಿತ್ತು. ಇಲ್ಲಿನ ಇಸ್ಲಾಮಿಯಾ ಕರೀಮಿಯಾ ಶಾಲೆಯ ಮಕ್ಕಳಿಗೂ ಇದೇ ಪರೀಕ್ಷಾ ಕೇಂದ್ರವಾಗಿತ್ತು.

ಆದರೆ ಜೂನ್ 9 ರಂದು ಪರೀಕ್ಷೆ ಬರೆಯಲು ತೆರಳಿದ ಕರೀಮಿಯಾ ಶಾಲೆಯ ವಿಧ್ಯಾರ್ಥಿಗಳಿಗೆ ಪರೀಕ್ಷಾ ಹಾಲ್‍ನ ಒಳಗೆ ಹೋಗಲು ಅನುಮತಿ ನೀಡಲಿಲ್ಲ. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದಾಗ ಪರೀಕ್ಷಾ ಹಾಲ್‍ನ ಹೊರಗಿದ್ದುಕೊಂಡೇ ಪರೀಕ್ಷಗೆ ಬರೆಯಲು ಅನುಮತಿಸಿದರು. ಧಾರ್ಮಿಕ ಸೌಹಾರ್ದತೆಯನ್ನು ಕಲಿಸಬೇಕಾಗಿದ್ದ ಶಿಕ್ಷಣ ಕೇಂದ್ರದಲ್ಲಿ ಕೋಮುವಿದ್ವೇಷ ಹರಡುತ್ತಿದೆ. ಅಪರಾಧಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ಆರಿಫ್ ಮಸೂದ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

ಓದುಗರೇ ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.