ದಿನನಿತ್ಯ ಏರುತ್ತಿರುವ ಕೊರೋನಾ ಪ್ರಕರಣ: ಮುಂಬೈಯಲ್ಲಿ ಮತ್ತೆ ಲಾಕ್‍ಡೌನ್ ಗೆ ಚಿಂತನೆ

0
453

ಸನ್ಮಾರ್ಗ ವಾರ್ತೆ

ಮುಂಬೈ: ನಗರದಲ್ಲಿ ಕೊರೋನಾ ಪ್ರಕರಣಗಳು ದಿನ ನಿತ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪುನಃ ಲಾಕ್‍ಡೌನ್ ಗೆ ಜಾರಿಗೆ ತರುವ ಸೂಚನೆಯನ್ನು ಕಾರ್ಪೊರೇಷನ್ ಮೇಯರ್ ನೀಡಿದ್ದಾರೆ. ಜನರ ಸಹಕಾರದಂತೆ ಲಾಕ್‍ಡೌನ್‍ಗೆ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಕಾರ್ಪೊರೇಷನ್ ಮೇಯರ್ ಕಿಶೋರ್ ಪೆಡನ್‍ಕರ್ ತಿಳಿಸಿದ್ದಾರೆ.

ರೈಲಿನಲ್ಲಿ ಓಡಾಡುವವರು ಮಾಸ್ಕ್ ಧರಿಸುವುದಿಲ್ಲ. ಜನರು ಮುಂಜಾಗೃತೆ ಪಾಲಿಸಬೇಕು. ಅಲ್ಲದಿದ್ದರೆ ಲಾಕ್‍ಡೌನ್‍ಗೆ ಹೋಗಬೇಕಾಗಬಹುದು ಎಂದು ಮೇಯರ್ ಹೇಳಿದರು. ಮಹಾರಾಷ್ಟ್ರದ ಪರಿಸ್ಥಿತಿ ಈಗ ಗಂಭೀರವೆಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದರು. ಕೆಲವೊಮ್ಮೆ ಕಠಿಣ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಅದಕ್ಕಾಗಿ ಜನರು ತಯಾರಿರಬೇಕು ಎಂದು ಅಜಿತ್ ಪವಾರ್ ಸೂಚಿಸಿದರು. ಜನರ ಮುನ್ನೆಚ್ಚರಿಕೆ ಕೊರತೆ ಇದೆ ಎಂದು ಇತ್ತೀಚಿಗೆ ವರದಿಗಳು ಹೊರ ಬಂದಿತ್ತು ಎಂದು ಅಜಿತ್ ಪವಾರ್ ಹೇಳಿದರು.

ಮುಂಬೈಯಲ್ಲಿ ಸೋಮವಾರ 493 ಮಂದಿಗೆ ಕೊರೋನಾ ಪಾಸಿಟಿವ್ ಆಗಿತ್ತೆಂದು ವರದಿಯಾಗಿದೆ. ಇದರೊಂದಿಗೆ ಮುಂಬೈಯಲ್ಲಿ ಒಟ್ಟು ಕೊರೋನಾ ರೋಗಿಗಳ ಸಂಖ್ಯೆ 3,14,569 ಆಗಿದೆ. ಒಟ್ಟು 11,420 ಮಂದಿ ಮೃತಪಟ್ಟಿದ್ದಾರೆ.