ನೆಹರೂ ಮ್ಯೂಸಿಯಮ್| ಪ್ರದಾನಿಗಳ ಮ್ಯೂಸಿಯಮ್ ಮತ್ತು ಸೊಸೈಟಿಯಾಗಿ ಮರು ನಾಮಕರಣ

0
121

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದಿಲ್ಲಿಯ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಹಾಗೂ ವಾಚನಾಲಯವನ್ನು ಇನ್ನು ಮುಂದೆ ‘ಪ್ರಧಾನಿಗಳ ಮ್ಯೂಸಿಯಮ್ ಮತ್ತು ಸೊಸೈಟಿ’ ಎಂಬ ಹೆಸರಿನಿಂದ ಕರೆಯಲಾಗುವುದು ಎಂದು ಕೇಂದ್ರ ಸರಕಾರವು ನಿರ್ಧರಿಸಿದೆ.

ನೆಹರೂ ಸ್ಮಾರಕ ಮ್ಯೂಸಿಯಮ್ ನವೀಕರಣದ ಬಳಿಕ ‘ಪ್ರಧಾನ ಮಂತ್ರಿಗಳ ಮ್ಯೂಸಿಯಮ್’ ಎಂಬ ಹೆಸರಿನಿಂದ ಒಂದು ವರ್ಷಕ್ಕೂ ಮೊದಲು ಉದ್ಘಾಟನೆಗೊಂಡಿತ್ತು.

ನೆಹರೂ ಸ್ಮಾರಕ ಮ್ಯೂಸಿಯಮ್ ಮತ್ತು ವಾಚನಾಲಯ ಸೊಸೈಟಿಯ ಇತ್ತೀಚೆಗೆ ರಾಜ್ ನಾಥ್ ಸಿಂಗ್ ರ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೆಹರೂ’ ಹೆಸರನ್ನು ಬದಲಾಯಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸೊಸೈಟಿಯ ಸದಸ್ಯತ್ವದಿಂದ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಮತ್ತು ಕರಣ್ ಸಿಂಗ್ ರನ್ನು ತೆಗೆದು 2019 ರಲ್ಲಿ ಅದನ್ನು ಪುನರ್ ರಚಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಸೊಸೈಟಿಯ ಅಧ್ಯಕ್ಷರಾಗಿ ಮತ್ತು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ರನ್ನು ಉಪಾಧ್ಯಕ್ಷರಾಗಿ, ನಿರ್ಮಲಾ ಸೀತಾರಾಮನ್, ರಮೇಶ್ ಪೋಯಾಲ್, ಪ್ರಕಾಶ್ ಜವಡೇಕರ್, ವಿ. ಮುರಳೀಧರನ್ ಮತ್ತು ಪ್ರಹ್ಲಾದ್ ಸಿಂಗ್ ಪಟೇಲನ್ನು ಸದಸ್ಯರಾಗಿ ಅಂದು ನೇಮಿಸಲಾಗಿತ್ತು.

ನೆಹರು ಮ್ಯೂಸಿಯಮ್ ದಿಲ್ಲಿಯ ತೀನ್ ಮೂರ್ತಿ ಭವನದಲ್ಲಿತ್ತು. ಭಾರತದ ಸ್ವಾತಂತ್ರದ ಬಳಿಕ ಅದು ನೆಹರೂರ ಅಧಿಕೃತ ನಿವಾಸವಾಯಿತು. 1964ರಲ್ಲಿ ನೆಹರೂ ನಿಧನರಾದ ತಿಂಗಳುಗಳ ಬಳಿಕ, ದೇಶದ ಪ್ರಥಮ ಪ್ರಧಾನಿಯ 75ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದ್ದರು. ಸಂಸ್ಥೆಯ ಆಡಳಿತವನ್ನು ನೋಡಿಕೊಳ್ಳಲು ಎನ್ಎನ್ಎನ್ಎಲ್ ಸೊಸೈಟಿಯನ್ನು ಸ್ಥಾಪಿಸಿದ್ದರು.