ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‍ರಿಗೆ ಅರಬ್ ಪಾರ್ಲಿಮೆಂಟ್ ‘ಲೀಡರ್ಸ್ ಮೆಡಲ್’

0
170

ಸನ್ಮಾರ್ಗ ವಾರ್ತೆ

ರಿಯಾದ್, ಆ.8: ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‍ರಿಗೆ ಅರಬ್ ಪಾರ್ಲಿಮೆಂಟ್ ‘ಲೀಡರ್ಸ್ ಮೆಡಲ್’ ನೀಡಿ ಗೌರವಿಸಲಾಗಿದೆ.

ಅರಬ್ ಸಮಸ್ಯೆಗಳನ್ನು ಎದುರಿಸುವುದರಲ್ಲಿ ಮತ್ತು ಜಂಟಿಯಾಗಿ ಅರಬ್ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದರಲ್ಲಿ ಮಾಡಿದ ಪ್ರಯತ್ನಗಳ ಆಧಾರದಲ್ಲಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜಿದ್ದಾದ ಅರಬ್ ಪಾರ್ಲಿಮೆಂಟ್ ಸ್ಪೀಕರ್ ಆದಿಲ್ ಬಿನ್ ಅಬ್ದುರ್ರಹ್ಮಾನ್ ಅಲ್ ಅಸೂಮಿ ಪ್ರಶಸ್ತಿ ಪ್ರದಾನ ಮಾಡಿದ್ದು, ಮುಹಮ್ಮದ್ ಬಿನ್ ಸಲ್ಮಾನ್ ಮಾಡುತ್ತಿರುವ ಪ್ರಯತ್ನಗಳು ಮತ್ತು ದೃಢ ನಿರ್ಧಾರಗಳಿಗೆ ಶ್ಲಾಘಿಸಿ, ಅರಬ್ ಜನರ ಅಭಿನಂದನೆ ಮತ್ತು ಕೃತಜ್ಞತೆಗಳನ್ನು ಅರಬ್ ಪಾರ್ಲಿಮೆಂಟು ಸ್ಪೀಕರ್ ಮುಹಮ್ಮದ್ ಬಿನ್ ಸಲ್ಮಾನ್‍ರಿಗೆ ತಿಳಿಸಿದರು.

ಯುವರಾಜನಿಗೆ ಸಿಕ್ಕಿದ ಪ್ರಶಸ್ತಿ ಪರಮೊಚ್ಚ ಗೌರವವಾಗಿದೆ ಎಂದು ಸೌದಿ ಅರೇಬಿಯದ ಶೂರ ಕೌನ್ಸಿಲ್ ಸ್ಪೀಕರ್ ಡಾ. ಅಬ್ದುಲ್ಲ ಬಿನ್ ಮುಹಮ್ಮದ್ ಬಿನ್ ಇಬ್ರಾಹೀಂ ಆಲುಶೈಖ್ ಹೇಳಿದರು.

ಅರಬ್ ಸಂಬಂಧ ಉತ್ತಮ ಪಡಿಸುವುದಕ್ಕೆ ಯುವರಾಜ ನಿರ್ವಹಿಸಿದ ಮಹತ್ವದ ಪಾತ್ರಕ್ಕೂ, ಅದಕ್ಕಾಗಿ ಅವರು ಮಾಡುತ್ತಿರುವ ಪ್ರಯತ್ನಗಳಿಗೂ ಈ ಲೀಡರ್ಸ್ ಮೆಡಲ್ ಅಭಿನಂದನೆಯ ಪ್ರತೀಕವಾಗಿದೆ ಎಂದು ಅವರು ಹೇಳಿದರು.