ದೆಹಲಿ ಜಲ ಮಂಡಳಿ ಕಚೇರಿ ಧ್ವಂಸ: 30 ಮಂದಿ ವಶಕ್ಕೆ

0
406

ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ದೆಹಲಿ ಜಲ ಮಂಡಳಿಯ (ಡಿಜೆಬಿ) ಕಚೇರಿಗೆ ನುಗ್ಗಿ ಧ್ವಂಸ ಮಾಡಿದ ಘಟನೆಗೆ ಸಂಬಂಧಿಸಿ 30 ಮಂದಿಯನ್ನು ವಶಕ್ಕೆ ಪಡೆದಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.

ದೆಹಲಿ ಜಲ ಮಂಡಳಿಯ (ಡಿಜೆಬಿ) ಕಚೇರಿಗೆ ಇಂದು ಬೆಳಗ್ಗೆ ನುಗ್ಗಿದ್ದ ಗುಂಪೊಂದು ಕಚೇರಿಯನ್ನು ಧ್ವಂಸ ಮಾಡಿದ್ದಲ್ಲದೇ, ಧಾಂಧಲೆ ನಡೆಸಿತ್ತು. ಈ ಘಟನೆಯ ಹಿಂದೆ ಬಿಜೆಪಿ ಇರುವುದಾಗಿ ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ. ಈ ಘಟನೆಯ ಸಂಬಂಧ 30 ಜನರನ್ನು ವಶಕ್ಕೆ ಪಡೆದಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.

ಆಮ್ ಆದ್ಮಿ ಪಾರ್ಟಿ ರೈತರಿಗೆ ಬೆಂಬಲ ನೀಡಿ, ಮಾತನಾಡುತ್ತಿರುವುದರಿಂದ ಬಿಜೆಪಿ ಕಾರ್ಯಕರ್ತರು ಕಚೇರಿಗೆ ಹಾನಿ ಮಾಡಿದ್ದಾರೆ ಎಂದು ಎಎಪಿ ಮುಖಂಡ ಮತ್ತು ಡಿಜೆಬಿ ಉಪಾಧ್ಯಕ್ಷ ರಾಘವ್ ಚಡ್ಡಾ ಆರೋಪಿಸಿದ್ದಾರೆ. “ದೆಹಲಿ ಪೊಲೀಸರ ಸಹಾಯದಿಂದ ಈ ಘಟನೆ ನಡೆದಿರುವುದು ಸ್ಪಷ್ಟ” ಎಂದು ಆಪ್ ನಾಯಕ ಹೇಳಿದ್ದಾರೆ.