15 ವರ್ಷದ ಫೆಲಸ್ತೀನಿಯನ್ ಬಾಲಕನಿಗೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿದ ಇಸ್ರೇಲ್!

0
538

ಸನ್ಮಾರ್ಗ ವಾರ್ತೆ

ಜೆರುಸಲೇಮ್,ಜೂ.16: ಹದಿನೈದು ವರ್ಷದ ಫೆಲಸ್ತೀನಿ ಬಾಲಕನಿಗೆ ಇಸ್ರೇಲಿನ ಕೋರ್ಟು ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ಫೆಲಸ್ತೀನಿಯನ್ ಇನ್ಫಾರ್ಮೇಶನ್ ಸೆಂಟರ್ ವರದಿ ಮಾಡಿದೆ. ಹದಿನೈದು ವರ್ಷದ ಫೆಲಸ್ತೀನಿ ಬಾಲಕ ಹಮೌದ್ ಅಲ್ ಶೈಖ್‍ಗೆ ಇಸ್ರೇಲಿನ ಕೋರ್ಟು ಹತ್ತು ವರ್ಷದ ಜೈಲು ಶಿಕ್ಷೆ ವಿಧಿಸಿತ್ತು. 2019 ಆಗಸ್ಟ್ 15ಕ್ಕೆ ಹಮೌದ್‍ನನ್ನು ಇಸ್ರೇಲ್ ಪೊಲೀಸರು ಹಿಡಿದು ಕೊಂಡು ಹೋಗಿದ್ದರು. ಜೆರುಸಲೇಮ್ ಅಲ್ ಅಕ್ಸಾ ಮಸೀದಿಯ ಅಲ್ ಸಿಲ್‍ಸಿಲ್ ಗೇಟಿನ ಸಮೀಪ ಇಸ್ರೇಲ್ ಪೊಲೀಸ‌‌ಗೆ ಗಾಯಗೊಳಿಸಲು ಶ್ರಮಿಸಿದ ಆರೋಪ ಬಾಲಕನ ಮೇಲೆ ಹೊರಿಸಲಾಗಿದೆ.

ಬಂಧನದ ಮೊದಲು ನಡೆದ ಗುಂಡು ಹಾರಾಟದಲ್ಲಿ ಹಮೌದಿ ಗಂಭೀರ ಗಾಯಗೊಂಡಿದ್ದ. ಹನ್ನೊಂದು ವರ್ಷದ ಇನ್ನೊಬ್ಬ ಬಾಲಕ ನಸೀ ಅಬೂ ರೂಮಿ ಕೊಲೆಯಾಗಿದ್ದ. ಒಂದು ಗಂಟೆಗಳ ಕಾಲ ರಕ್ತದ ಮಡುವಿನಲ್ಲಿ ಬಿದ್ದಿದ ಹಮೌದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 190ಕ್ಕೂ ಹೆಚ್ಚು ಫೆಲಸ್ತೀನಿ ಬಾಲಕರು ಇಸ್ರೇಲಿನ ಜೈಲಿನಲ್ಲಿದ್ದಾರೆ. ಇವರಲ್ಲಿ 20 ಮಕ್ಕಳು ಹದಿನಾರುವ ವರ್ಷಕ್ಕಿಂತ ಕೆಳವಯೋಮಾನದವರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.