ಅಸ್ಸಾಂ: ಸಿಎಎ ವಿರೋಧಿ ಹೋರಾಟದಲ್ಲಿ ಬಂಧಿತ ವಿದ್ಯಾರ್ಥಿ ನಾಯಕನ ಗೋಡೆ ಚಿತ್ರ ರಚಿಸಿದ ಐವರ ಬಂಧನ

0
783

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.20: ಪೌರತ್ವ ತಿದ್ದುಪಡಿ ಕಾನೂನು ಹೋರಾಟದಲ್ಲಿ ಬಂಧಿತನಾದ ವಿದ್ಯಾರ್ಥಿ ನಾಯಕನ ಚಿತ್ರವನ್ನು ಗೋಡೆಯಲ್ಲಿ ಬರೆದದ್ದಕ್ಕೆ ನಾಲ್ವರು ಚಿತ್ರಕಲಾವಿದರು ಮತ್ತು ಒಬ್ಬ ಕಾಲೇಜು ವಿದ್ಯಾರ್ಥಿಯನ್ನು ಗುವಾಹಟಿಯಲ್ಲಿ ಬಂಧಿಸಲಾಗಿದೆ. ಸಿಐಎ ಆಕ್ಟಿವಿಸ್ಟ್ ಅಖಿಲ್ ಗೊಗೊಯ್‍ಯವರ ಚಿತ್ರ ಅಂಕ ಆಟ್ಸ್ ಕಲೆಕ್ಟಿವ್ ತಂಡ ಗೋಡೆಯಲ್ಲಿ ಬರೆದಿತ್ತು. ಗೋಡೆಯಲ್ಲಿದ್ದ ಚಿತ್ರವನ್ನು ಪೊಲೀಸರ ಉಪಸ್ಥಿತಿಯಲ್ಲಿ ಅಳಿಸಿ ಹಾಕಲಾಗಿದೆ ಎಂದು ಚಿತ್ರ ಕಲಾವಿದರು ಆರೋಪಿಸಿದ್ದಾರೆ.

2019ರ ಡಿಸೆಂಬರಿನಲ್ಲಿ ಸಿಎಎ ಹೋರಾಟದ ವೇಳೆ ಅಖಿಲ್ ಗೊಗೊಯ್‍‌ರವರನ್ನು ಬಂಧಿಸಲಾಗಿತ್ತು. ಈಗಲೂ ಅವರು ಜೈಲಿನೊಳಗಿದ್ದು ಅವರು ಕ್ಸಿಷ್ಕ್ ಮುಕ್ತಿ ಸಂಕರ ಸಮಿತಿ ನಾಯಕ ಕೂಡ ಆಗಿದ್ದಾರೆ. ಅವರು ಸಿಎಎ ವಿರುದ್ಧ ಹಿಂಸಾಗ್ರಸ್ತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿ ಜೈಲಿಗೆ ಅವರನ್ನು ಹಾಕಲಾಗಿತ್ತು. ಪ್ರತಿಭಟನಾಕಾರ ವಿರುದ್ಧ ಪೊಲೀಸರ ಲಾಠಿ ಚಾರ್ಜ್‌ನಲ್ಲಿ ಐವರು ಮೃತಪಟ್ಟಿದ್ದರು.

ದ್ರುಭ್ ಜಿತ್ ಶರ್ಮ, ರಾಹುಲ್ ಲಹೊನ್, ಕುಲ್ದೀಪ್ ಶರ್ಮ, ಬುಲ್‍ಬುಲ್ ದಾಸ್ ಕಾಲೇಜು ವಿದ್ಯಾರ್ಥಿ ಪ್ರಾಂಜಲ್ ಕಲಿತ ಎಂಬವರನ್ನು ಬಂಧಿಸಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಚಿತ್ರ ಬರೆಯಲು ಅನುಮತಿ ಪಡೆದಿರಬೇಕೆಂದು ಪೊಲೀಸರು ಕ್ರಮ ಜರಗಿಸಿದ್ದಾರೆ. ಆದರೆ ಕಳೆದ ಡಿಸೆಂಬರಿನಲ್ಲಿ ಅಖಿಲ್ ಗೊಗೊಯ್‌ರವರನ್ನು ಬಂಧಿಸಿದ್ದಕ್ಕೆ ಮತ್ತು ಅನಧಿಕೃತವಾಗಿ ಜೈಲಿನಲ್ಲಿಟ್ಟಿರುವುದನ್ನು ಪ್ರತಿಭಟಿಸಿ ಗೋಡೆ ಚಿತ್ರ ಬರೆಯಲಾಗಿತ್ತು.