ಉಡುಪಿ, ಜು 16 : ಉಡುಪಿಯ ಬಿಜೆಪಿ ನಗರಸಭಾ ಸದಸ್ಯ ಯೋಗೀಶ್ ವಡಬಾಂಡೇಶ್ವರ ಅವರು ಉಡುಪಿ ಆರೋಗ್ಯಾಧಿಕಾರಿ ಪ್ರಸನ್ನ ಅವರ ಮೇಲೆ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಹಲ್ಲೆಯಿಂದ ಗಾಯಗೊಂಡ ಆರೋಗ್ಯಾಧಿಕಾರಿ ಪ್ರಸನ್ನ ಅವರನ್ನು ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ನಗರ ಸಭೆಯ ವಡಬಾಂಡೇಶ್ವರ ವಾರ್ಡ್ ನಲ್ಲಿ ನಿನ್ನೆ ರಾತ್ರಿ ಮರ ಬಿದ್ದಿದ್ದು, ಅದನ್ನು ತೆರವು ಗೊಳಿಸುವಂತೆ ವಾರ್ಡ್ ನ ಬಿಜೆಪಿಯ ಸದಸ್ಯ ಯೋಗೀಶ್ ಸಾಲ್ಯಾನ್ ಆರೋಗ್ಯಾಧಿಕಾರಿ ಪ್ರಸನ್ನ ರವರಿಗೆ ಫೋನ್ ಮೂಲಕ ತಿಳಿಸಿದ್ದರು. ಆದರೆ ಇಂದು ಬೆಳಿಗಿನವರೆಗೆ ಅದನ್ನ ತೆರವುಗೊಳಿಸದ ಕಾರಣ ಇಂದು ಬೆಳಿಗ್ಗೆ ಆರೋಗ್ಯಾಧಿಕಾರಿ ಪ್ರಸನ್ನ ರವರ ಕಚೇರಿಗೆ ನುಗ್ಗಿದ ಯೋಗೀಶ್ ಈ ವಿಚಾರದ ಬಗ್ಗೆ ತಗಾದೆ ತೆಗೆದು, ಏಕಏಕಿ ಮುಖಕ್ಕೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಇದರಿಂದ ಪ್ರಸನ್ನ ರವರ ಬಲ ಕಣ್ಣಿಗೆ ತೀವ್ರ ತರದ ಪೆಟ್ಟು ಬಿದ್ದಿದೆ. ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಬಿಜೆಪಿ ಹಾಗು ಕಾಂಗ್ರೆಸ್ ನಗರಸಭಾ ಸದಸ್ಯರು ಭೇಟಿ ಮಾಡಿ ಅರೋಗ್ಯ ವಿಚಾರಿಸಿರುವುದಾಗಿ ತಿಳಿದುಬಂದಿದೆ.













