ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಆ.31: ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ವಕ್ಫ್ ಬೋರ್ಡಿಗಾಗಿ ಹಾಜರಾಗುವ ವಕೀಲ ರಾಜೀವ್ ಧವನ್ರಿಗೆ ಬೆದರಿಕೆ ಹಾಕಲಾಗಿದೆ. 88 ವರ್ಷ ವಯಸ್ಸಿನ ಚೆನ್ನೈಯ ಪ್ರೊಫೆಸರ್ ಎನ್.ಶಣ್ಮುಗಂ ಅವರಿಗೆ ಬೆದರಿಕೆ ಹಾಕಿದ್ದಾರೆ. ಇದನ್ನು ರಾಜೀವ್ ಧವನ್ ಸುಪ್ರೀಂಕೋರ್ಟಿನ ಗಮನಕ್ಕೆ ತಂದಿದ್ದಾರೆ.
ಆಗಸ್ಟ್ 14ಕ್ಕೆ ಎನ್.ಶಣ್ಮುಗಂ ಎಂಬ ವ್ಯಕ್ತಿ ಬೆದರಿಕೆ ಹಾಕಿದ್ದಾನೆಂದು ರಾಜೀವ್ ಧವನ್ ಹೇಳಿದ್ದರು. ಇದಲ್ಲದೆ ಸಂಜಯ್ ಲಾಲ್ ಭಜರಂಗಿ ಎಂಬಾತ ಕೂಡ ಬೆದರಿಕೆ ಹಾಕಿದ್ದಾನೆ. “1941ಕ್ಕಿಂತ ಹಿಂದೆ ನಾನು ಐವತ್ತು ಲಕ್ಷ ಬಾರಿಯಾದರೂ ಗಾಯತ್ರಿ ಮಂತ್ರ ಪಠಿಸಿದ್ದೇನೆ. 27,000 ಬಾರಿ ಭಗವತ್ ಗೀತೆ ಓದಿದ್ದೇನೆ. ಆ ನಾಲಿಗೆಯಿಂದ ನಾನು ಶಾಪ ಕೊಡುತ್ತಿದ್ದೇನೆ. ನೀವು ಮಾಡಿದ ತಪ್ಪಿಗೆ ಶಿಕ್ಷೆ ಸಿಗುತ್ತದೆ. ನಿಮ್ಮ ಕುಟುಂಬವೂ ನನ್ನ ಶಾಪದಲ್ಲಿ ನಾಶವಾಗಲಿದೆ” ಎಂದು ಪ್ರೊಫೆಸರಾಗಿರುವ ಶಣ್ಮುಗಂ ಪತ್ರ ಬರೆದಿದ್ದಾರೆ.












