ಪೌರತ್ವ ಪಟ್ಟಿಯ ಎಲ್ಲ ವಲಸಿಗರನ್ನು ಹೊರಹಾಕಲು ಸಾಧ್ಯವಿಲ್ಲ- ಹಿಮಾಂತ ಶರ್ಮ

0
516

ಸನ್ಮಾರ್ಗ ವಾರ್ತೆ

ಗುವಾಹಟಿ,ಆ. 31: ಅಸ್ಸಾಂ ರಾಷ್ಟ್ರೀಯ ಪೌರತ್ವ ಪಟ್ಟಿ ಎನ್‍ಆರ್‌ಸಿ ಜಾರಿ ಮಾಡುವ ಮೂಲಕ ಈಶಾನ್ಯ ಭಾರತದ ಎಲ್ಲ ಅನಧಿಕೃತ ವಲಸೆಗಾರರನ್ನು ಹೊರಹಾಕಲು ಸಾಧ್ಯವಿಲ್ಲ ಎಂದು ಬಿಜೆಪಿ ಸಚಿವ ಹಿಮಾಂತ ಬಿಶ್ವ ಶರ್ಮ ಹೇಳಿದ್ದಾರೆ.
ಪಟ್ಟಿಯಲ್ಲಿ ಹೊರಗಿದ್ದರೂ ಎಲ್ಲ ವಲಸೆಗಾರರನ್ನು ಹೊರಹಾಕಲು ಸಾಧ್ಯವೆನ್ನುವ ನಿರೀಕ್ಷೆ ಇಲ್ಲ.

ಆದರೆ, ಎಲ್ಲ ದಾಖಲೆಗಳನ್ನು ಹಾಜರುಪಡಿಸಲು ಸಾಧ್ಯವಾಗದೆ ಪಟ್ಟಿಯಲ್ಲಿ ಜಾಗ ಪಡೆಯದ ಹಲವು ಭಾರತೀಯ ಪ್ರಜೆಗಳೂ ಹೊರಗಾಗುವ ಸಾಧ್ಯತೆಯಿದೆ. ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಳ್ಳುವ ದಕ್ಷಿಣ ಬಲ್ಮಾರ, ಧುಬ್ರಿ ಮೊದಲಾದ ಸ್ಥಳಗಳಿಗಿಂತ ಭೂಮಿಪುತ್ರ ಜಿಲ್ಲೆಯ ವಲಸೆಗಾರರ ಪ್ರಮಾಣ ಹೆಚ್ಚಿದೆ. ಆದ್ದರಿಂದ ರಾಷ್ಟ್ರೀಯ ಪೌರತ್ವ ಪಟ್ಟಿಯಲ್ಲಿ ನಮಗೆ ಆಸಕ್ತಿಯಿಲ್ಲ ಎಂದು ಹಿರಿಯ ನಾಯಕ ಹಿಮಾಂತ ಬಿಶ್ವ ಶರ್ಮ ಹೇಳಿದರು.

ಬಾಂಗ್ಲಾದೇಶಿಯರನ್ನು ಹೊರಹಾಕುವ ಅಂತಿಮ ಪಟ್ಟಿ ಇದಲ್ಲ. ಇದಕ್ಕೆ ಸಮಯವಕಾಶ ಇದೆ. ಬಿಜೆಪಿಯ ಆಡಳಿತ ಕಾಲದಲ್ಲಿ ಬೇರೆ ಅಂತಿಮ ಪಟ್ಟಿಗಳು ಹೊರಬರಲಿದೆ ಎಂದು ಶರ್ಮ ಹೇಳಿದರು. 1951ರ ಬಳಿಕ ಮೊದಲ ಬಾರಿ ನವೀಕರಿಸಿದ ಅಸ್ಸಾಂ ಪೌರತ್ವ ಪಟ್ಟಿ ಇಂದು ಆನ್‍ಲೈನ್ ಮೂಲಕ ಪ್ರಕಟವಾಗಿದೆ. ಅಂತಿಮ ಪಟ್ಟಿಯಿಂದ ಹೊರಗಾದವರನ್ನು ತಕ್ಷಣ ವಿದೇಶಿಗಳೆಂದು ಘೋಷಿಸುವುದಿಲ್ಲ. ಅವರಿಗೆ ಕಾನೂನಿನ ನೆರವು ಪಡೆಯಬಹುದಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.