ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 20: ಬಾಬರಿ ಮಸೀದಿ ಕೆಡವಿದ ಪ್ರಕರಣದ ಆರೋಪಿಗಳನ್ನು ಮುಖ್ಯ ಪದಾಧಿಕಾರಿಗಳನ್ನಾಗಿ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯ ಮಾಜಿ ಸಹಾಯಕ ನಿರ್ಮಾಣ ಸಮಿತಿಯ ಅಧ್ಯಕ್ಷನನ್ನಾಗಿ ಟ್ರಸ್ಟ್ ನ ಪ್ರಥಮ ಸಭೆ ದಿಲ್ಲಿಯಲ್ಲಿ ನಡೆದಿದೆ. ಹಿರಿಯ ಸುಪ್ರೀಂ ಕೋರ್ಟು ವಕೀಲ ಕೆ. ಪರಾಶರನ್ ದಿಲ್ಲಿಯ ಮನೆಯಲ್ಲಿ ಸಭೆ ನಡೆದು ಹದಿನಾಲ್ಕು ಮಂದಿ ಟ್ರಸ್ಟಿಗಳನ್ನು ಆಯ್ಕೆ ಮಾಡಲಾಯಿತು.
ಸುಪ್ರೀಂ ಕೋರ್ಟಿನ ತೀರ್ಪಿನ ಆಧಾರದಲ್ಲಿ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ರೂಪಿಸಲಾಗಿದ್ದು ಟ್ರಸ್ಟ್ ಅಧ್ಯಕ್ಷನಾಗಿ ವಿಶ್ವ ಹಿಂದೂ ಪರಿಷತ್ನ ರಾಮಮಂದಿರ ನ್ಯಾಸ್ ಮುಖ್ಯಸ್ಥ ನೃತ್ಯ ಗೋಪಾಲ್ ದಾಸ್ ಮತ್ತು ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಚಂಪಕ್ ರಾಯ್ರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳು ಇವರು. ಪ್ರಧಾನಿ ನರೇಂದ್ರ ಮೋದಿಯ ಮಾಜಿ ಪ್ರಿನ್ಸಿಪಲ್ ಕಾರ್ಯದರ್ಶಿ ನೃಪೇಂದ್ರ ಮಿಶ್ರ, ರಾಮಮಂದಿರ ನಿರ್ಮಾಣ ಕಮಿಟಿಯ ಚೇರ್ಮೆನ್ ಪುಣೆಯ ಸ್ವಗೋವಿಂದ್ ದೇವ್ ಗಿರಿಯವರು ಟ್ರಸ್ಟ್ ನ ಖಜಾಂಜಿಯಾಗಿದ್ದಾರೆ. ಮಂದಿರ ನಿರ್ಮಾಣ ತಾರೀಕು ನಿಶ್ಚಯಿಸಲು ನಿರ್ಮಾಣ ಕಮಿಟಿ ಮುಂದಿನ ತಿಂಗಳು ಸಭೆ ಸೇರಲಿದೆ ಎಂದು ವಿಶ್ವ ಪ್ರಸನ್ನ ತೀರ್ಥ ಸ್ವಾಮಿ ತಿಳಿಸಿದರು.
ರಾಮ ಮಂದಿರಕ್ಕಾಗಿ ಅಯೋಧ್ಯೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಶಾಖೆಯಲ್ಲಿ ಖಾತೆ ತೆರೆಯಲಾಗುವುದು. ಈ ತಿಂಗಳು ಐದನೆ ತಾರೀಕಿಗೆ ರಾಮಮಂದಿರ ಟ್ರಸ್ಟ್ ನ ಅಧಿಕೃತ ಘೋಷಣೆ ಪಾರ್ಲಿಮೆಂಟಿನಲ್ಲಿ ಘೋಷಿಸಿದ್ದು ಅದರ ಎಲ್ಲ ಸದಸ್ಯರ ವಿವರ ಮತ್ತು ಪದಾಧಿಕಾರಿಗಳ ಕುರಿತು ವಿವರ ನೀಡಿರಲಿಲ್ಲ.












