ಮತದಾರರ ಗುರುತು ಚೀಟಿಗೆ ಆಧಾರ್ ಜೋಡಣೆಗೆ ಕೇಂದ್ರ ಅಸ್ತು: ವಲಸಿಗರಿಗೂ ಮತದಾನಕ್ಕೆ ಅವಕಾಶ

0
689

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 20: ಮತದಾರರ ಗುರುತು ಚೀಟಿಗೆ ಆಧಾರ್ ಚೀಟಿಯನ್ನು ಜೋಡಿಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಲು ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ಇದಕ್ಕೆ ಸುಪ್ರೀಂಕೋರ್ಟು ತೀರ್ಪು ಅನ್ನು ಮೀರಿನಿಲ್ಲುವ ಸಲುವಾಗಿ ಆಧಾರ್ ಕಾರ್ಡ್ ಕಾನೂನಿನಲ್ಲಿ ತಿದ್ದುಪಡಿ ತರುವ ಸೂಚನೆಯನ್ನು ಕಾನೂನು ಸಚಿವಾಲಯ ಸಿದ್ಧಪಡಿಸಿದೆ. ಕೇಂದ್ರ ಸಚಿವ ಸಂಪುಟದ ಅನುಮತಿ ದೊರೆತೊಡನೆ ಸರಕಾರ ಕಾನೂನು ರಚನೆಯೆಡೆಗೆ ಹೊರಡಲಿದೆ. ವಲಸಿಗರಿಗೂ ಮತದಾನ ಮಾಡುವ ಹಕ್ಕನ್ನು ಕಾನೂನು ತಿದ್ದುಪಡಿಯಲ್ಲಿ ಸೇರಿಸಲಾಗುವುದು ಎಂದು ಕಾನೂನು ಸಚಿವಾಲಯ ತಿಳಿಸಿದೆ. ಆಧಾರನ್ನು ಗುರುತಿನ ಚೀಟಿಗೆ ಜೋಡಿಸುವುದಕ್ಕಾಗಿ 33 ಕೋಟಿ ಮಂದಿಯಿಂದ ಚುನಾವಣಾ ಆಯೋಗ ವಿವರವನ್ನು ಸಂಗ್ರಹಿಸುವ ವೇಳೆ ಸುಪ್ರೀ೦ ಕೋರ್ಟು ತೀರ್ಪು ಪ್ರತಿಕೂಲವಾಗಿ ಬಂದಿತ್ತು. ಇದರೊಂದಿಗೆ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಪುನಃ ಕಾನೂನು ತಿದ್ದುಪಡಿಯೊಂದಿಗೆ ಈ ಪ್ರಕ್ರಿಯೆಯನ್ನು ಮರು ಊರ್ಜಿಗೊಳಿಸಲು ಆಯೋಗ ಮತ್ತು ಕೇಂದ್ರ ಸರಕಾರದ ನಡುವೆ ಸಹಮತ ಏರ್ಪಟ್ಟಿದೆ.

ಚುನಾವಣಾ ಸುಧಾರಣೆಗಾಗಿ ಮಂಗಳವಾರ ನಡೆದ ಸಮಾಲೋಚನಾ ಸಭೆಯಲ್ಲಿ ಕೇಂದ್ರ ಸರಕಾರ ಆಯೋಗಕ್ಕೆ ತನ್ನ ನಿರ್ಧಾರವನ್ನು ತಿಳಿಸಿದೆ. ಕೇಂದ್ರ ಕಾನೂನು ಕಾರ್ಯದರ್ಶಿ ನಾರಾಯಣ ರಾಜು ಮತ್ತು ಚುನಾವಣಾ ಆಯುಕ್ತ ಸುನೀಲ್ ಅರೋರ ಸಮಾಲೋಚನೆಯಲ್ಲಿ ಭಾಗವಹಿಸಿದ್ದರು. ಆಧಾರನ್ನು ಮತದಾರ ಚೀಟಿ ಜೋಡಿಸಿದರೆ ವಲಸಿಗರಿಗೆ ಮತದಾನ ಮಾಡಲು ಸಾಧ್ಯವಾಗುವುದು ಎಂದು ಆಯೋಗ ಹೇಳುತ್ತಿದೆ.