ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.1: ದೇಶದ ಕಾನೂನು ಮೂಲಕ ಬಾಬರಿ ಭೂವಿವಾದ ಪರಿಹರಿಸಬೇಕಾಗಿದೆ. ಶರೀಅತ್ ಕಾನೂನಿನ ಮೂಲಕ ಅಲ್ಲ ಎಂದು ಸುನ್ನಿ ವಕ್ಫ್ ಬೋರ್ಡ್ ಸುಪ್ರೀಂಕೋರ್ಟಿನಲ್ಲಿ ತಿಳಿಸಿತು. ಸುಪ್ರೀಂಕೋರ್ಟು ನಿಯೋಜಿಸಿದ ಎರಡನೆ ಬಾರಿಯ ಮಧ್ಯಸ್ಥಿಕೆಗೆ ಸಹಕರಿಸುವುದಿಲ್ಲ ಎಂದು ರಾಮ್ಲಲ್ಲಾ ತಿಳಿಸಿದೆ.
‘ನಿರ್ಮೋಹಿ’ ಅಂದರೆ ವ್ಯಾಮೋಹ ಇಲ್ಲದ್ದೆಂದು ಅರ್ಥ. ಆದರೆ ಪ್ರಕರಣದಲ್ಲಿ ಅರ್ಜಿ ಸಲ್ಲಿಸುವುದರೊಂದಿಗೆ ಅವರು ಸ್ವಂತ ಆಧ್ಯಾತ್ಮಿಕ ಅಸ್ತಿತ್ವವನ್ನು ನಿರಾಕರಿಸಿದಂತಾಯಿತು ಎಂದು ಸುನ್ನಿ ವಕ್ಫ್ ಬೋರ್ಡ್ ಪರ ವಕೀಲ ನಿಝಾಂ ಪಾಶ ವಾದಿಸಿದರು.
ಬಾಬರ್ ಶರೀಅತ್ ಪ್ರಕಾರ ಆಳ್ವಿಕೆ ನಡೆಸಿದ್ದಾನೆ ಎನ್ನುವಂತಿಲ್ಲ. ಇಸ್ಲಾಮಿನಲ್ಲಿ ಮಸೀದಿ ಸಾಂಸ್ಕೃತಿಕ ಕೇಂದ್ರ ಕೂಡ ಆಗಿದೆ. ಆದ್ದರಿಂದ ಕಾನೂನು ಉಲ್ಲಂಘಿಸಿ ಬಾಬರ್ ಮಸೀದಿ ಕಟ್ಟಿದ್ದೆಂದು ಹೇಳುವುದರಲ್ಲಿ ಅರ್ಥವಿಲ್ಲ. ಹಿಂದೆ ಒಮ್ಮೆ ನಡೆದ ಶರಣಾಗತಿ, ಯುದ್ಧಗಳು ಮತ್ತು ಅದರಿಂದುಂಟಾದ ನಾಶನಷ್ಟ ಮತ್ತು ಧಾರ್ಮಿಕತೆಯನ್ನು ನೋಡುವುದರಲ್ಲಿ ಅರ್ಥವಿಲ್ಲ. ಅಂದಿನ ಸಾರ್ವಭೌಮತ್ವದಿಂದ ನಾವೆಲ್ಲ ಬಹಳ ಮುಂದೆ ಸಾಗಿದ್ದೇವೆ ಎಂಬುದನ್ನು ತಿಳಿಯಬೇಕಿದೆ ಎಂದು ಅವರು ವಾದಿಸಿದರು.












