ಮುಸ್ಲಿಂ ಮಹಿಳೆಯರನ್ನು ಅತ್ಯಾಚಾರಗೈಯ್ಯಲು ಕರೆ ನೀಡಿದ “ಬಜರಂಗ್ ಮುನಿ ಆದರಣೀಯ ವ್ಯಕ್ತಿ”: ಯುಪಿ ಪೊಲೀಸ್ ಹೇಳಿಕೆ

0
250

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಮುಸ್ಲಿಂ ಮಹಿಳೆಯರನ್ನು ಅತ್ಯಾಚಾರಗೈಯ್ಯಲು ಕರೆ ನೀಡಿದ ತೀವ್ರ ಹಿಂದುತ್ವವಾದಿ ಬಜರಂಗ್ ಮುನಿ ಧರ್ಮ ವಿಶ್ವಾಸಿಗಳಿಗೆ ಆದರಣೀಯ ವ್ಯಕ್ತಿಯೆಂದು ಉತ್ತರಪ್ರದೇಶ ಪೊಲೀಸರು ಹೇಳಿದ್ದಾರೆ. ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮುಹಮ್ಮದ್ ಝುಬೈರ್ ಜಾಮೀನು ಅರ್ಜಿ ಪರಿಗಣಿಸುವ ವೇಳೆ ಪೊಲೀಸರು ಈ ಹೇಳಿಕೆ ನೀಡಿದ್ದಾರೆ.

ಬೃಹತ್ ಅನುಯಾಯಿ ವೃಂದವಿರುವ ಸೀತಾಪುರದ ಆದರಣೀಯ ಧರ್ಮನಾಯಕ ಬಜರಂಗ್ ಮುನಿ ಆಗಿದ್ದಾರೆ ಎಂದು ಉತ್ತರಪ್ರದೇಶ ಪೊಲೀಸರಿಗಾಗಿ ಹಾಜರಾದ ಅಡಿಶನಲ್ ಸಾಲಿಸಿಟರ್ ಜನರಲ್ ಎಸ್‍ವಿ ರಾಜು ವಾದಿಸಿದರು. ಅರ್ಜಿಯಲ್ಲಿ ಸುಪ್ರೀಂ ಕೋರ್ಟು ಝುಬೈರ್‌ಗೆ ಮಧ್ಯಂತರ ಜಾಮೀನು ಅನುಮತಿಸಿದೆ.

ಯಾವುದೇ ಧರ್ಮಕ್ಕೆ ದ್ವೇಷದ ವ್ಯಾಪಾರಿ ಎಂದು ಕರೆಯುವಾಗ ಅದು ಸಮಸ್ಯೆ ಸೃಷ್ಟಿಯಾಗುತ್ತದೆ. ಬಜರಂಗ್ ಬಾಬರ ಅಭಿಮಾನಿಗಳ ಧಾರ್ಮಿಕ ಭಾವನೆಗೆ ಝುಬೈರ್ ಹಾನಿ ಮಾಡಿದರು. ಅದು ಮನಃಪೂರ್ವಕವಾದರೂ ಅಲ್ಲದಿದ್ದರೂ ವಿಚಾರಣೆ ಎದುರಿಸಬೇಕಾದುದು ಎಂದು ಉತ್ತರಪ್ರದೇಶ ಪೊಲೀಸರಿಗಾಗಿ ಹಾಜರಾದ ರಾಜು ವಾದಿಸಿದರು.

ಮುಸ್ಲಿಂ ಮಹಿಳೆಯನ್ನು ಅತ್ಯಾಚಾರ ಮಾಡಬೇಕೆಂದು ಪೊಲೀಸರ ಮುಂದೆ ಬಹಿರಂಗವಾಗಿ ಘೋಷಿಸಿದ ವ್ಯಕ್ತಿ ಬಜರಂಗ್ ಮುನಿ ಎಂದು ಝುಬೈರ್ ಪರವಾಗಿ ಹಾಜರಾದ ಹಿರಿಯ ವಕೀಲ ಕಾಲಿನ್ ಗೋನ್ಸವಾಲಿಸ್ ಬೆಟ್ಟು ಮಾಡಿದರು. ಮುಸ್ಲಿಂ ಮಹಿಳೆಯನ್ನು ಅಪರಹರಣಗೈದು ಅತ್ಯಾಚಾರ ಮಾಡಬೇಕೆಂದು ಪೊಲೀಸರ ಮುಂದೆಯ ಸನ್ಯಾಸಿ ಹೇಳಿದ್ದು, ನಾನು ಇದನ್ನು ಟ್ವೀಟ್ ಮಾಡಿದ್ದೆ. ಅದರ ಸಂಪೂರ್ಣ ವೀಡಿಯೊ ನನ್ನಲ್ಲಿದೆ ಎಂದರು. ಈ ವಿಷಯದಲ್ಲಿ ತನಿಖೆ ನಡೆಯುತ್ತಿದೆ ಎಂದು ಸೀತಾಪುರ ಪೊಲೀಸರು ಉತ್ತರಿಸಿದ್ದು, ಬಜರಂಗ್ ಮುನಿಯ ಹೇಳಿಕೆಯ ವಿರುದ್ಧ ದೇಶಿಯ ಮಹಿಳಾ ಆಯೋಗ ಕ್ರಮ ಜರಗಿಸುತ್ತಿದೆ ಎಂದು ಅವರು ಹೇಳಿದರು.