ಬಕ್ರೀದ್ ಹಬ್ಬ: ದೇಶದ ಆರ್ಥಿಕತೆ ಮತ್ತು ಉದ್ಯೋಗ

0
458

ಸನ್ಮಾರ್ಗ ವಾರ್ತೆ

— ಡಾ| ಜೆ ಎಸ್ ಪಾಟೀಲ

20 ಕೋಟಿ ಭಾರತೀಯ ಮುಸ್ಲಿಮರು ಈದ್ ಉಲ್ ಅಧಾವನ್ನು (ಭಾರತದಲ್ಲಿ ಬಕ್ರೀದ್ ಎಂದು ಕರೆಯಲಾಗುತ್ತದೆ) ಆಚರಿಸುತ್ತಾರೆ. ಅಂದರೆ ಅಂದಾಜು 8-10% ಮುಸ್ಲಿಮರು 10,000/- ರಿಂದ 50,000/- ಬೆಲೆಯ ಆಡುಗಳು/ಕುರಿಗಳನ್ನು ಬಕ್ರೀದ್ ಹಬ್ಬಕ್ಕೆ ಬಲಿ ಕೊಡುತ್ತಾರೆ.

ಪ್ರತಿ ಪ್ರಾಣಿಗೆ ಸರಾಸರಿ 20,000/- ಬೆಲೆಯನ್ನು ತೆಗೆದುಕೊಂಡರೆ…2 ಕೋಟಿ × ರೂ 20000 = ರೂ
400,000,000,000. (4 ಲಕ್ಷ ಕೋಟಿ)

ಆರ್ಥಿಕ ದೃಷ್ಟಿಕೋನದಿಂದ ಇದು ಯಾರಿಗೆಲ್ಲ ಪ್ರಯೋಜನವಿದೆ ಎಂದು ನೋಡೋಣ.

ಬಕ್ರೀದ್ ಹಬ್ಬಕ್ಕೆ ಬಳಕೆಯಾಗುವುದು ಚೈನೀಸ್ ಅಥವಾ ಬಹುರಾಷ್ಟ್ರೀಯ ಉತ್ಪನ್ನಗಳಲ್ಲ. ಬದಲಾಗಿ 100% ದೇಸಿ ಗ್ರಾಮೀಣ ಅರ್ಥಶಾಸ್ತ್ರದ ಸಾಕು ಪ್ರಾಣಿಗಳು. ಈ ಪ್ರಾಣಿಗಳನ್ನು ಸಾಕುವವರು ಹಾಗೂ ಮಾರುವವರು ನಮ್ಮ ಗ್ರಾಮೀಣ ಭಾರತದ ರೈತರು ಮಾತ್ರ. ಒಬ್ಬ ರೈತ ವರ್ಷಕ್ಕೆ ಸರಾಸರಿ 10 ಮೇಕೆಗಳನ್ನು ನಿರ್ವಹಿಸಿದರೆ, 2 ಕೋಟಿ ÷ 10 = 20 ಲಕ್ಷ ಕುಟುಂಬಗಳು ನೇರ ಉದ್ಯೋಗ ಪಡೆಯುತ್ತವೆ.

ಆದ್ದರಿಂದ ಬಕ್ರೀದ್ ಹಬ್ಬ ಸ್ಥಳೀಯ ವ್ಯಾಪಾರ ವ್ಯವಹಾರಕ್ಕೆ ಅಪಾರವಾದ ಕೊಡುಗೆಯನ್ನು ನೀಡುತ್ತದೆ. ಜೊತೆಗೆ 4 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕತೆ ಮತ್ತು ಸುಮಾರು 20 ಲಕ್ಷ ಸಣ್ಣ ರೈತರಿಗೆ ಉದ್ಯೋಗವನ್ನು ಒದಗಿಸುತ್ತದೆ. ರೈತರ ವ್ಯವಹಾರವು ಧರ್ಮವನ್ನು ಆಧರಿಸಿಲ್ಲ ˌ ಆದ್ದರಿಂದ ವಿವಿಧ ಸಮುದಾಯಗಳ ಎಲ್ಲಾ ರೈತರು ಇದರ ಪ್ರಯೋಜನ ಪಡೆಯುತ್ತಾರೆ.

ಪ್ರತಿ ಮೇಕೆಯ ಮಾಂಸವನ್ನು ಕನಿಷ್ಠ 20 ಜನರು ಸೇವಿಸುತ್ತಾರೆ, ಆದ್ದರಿಂದ ಬಕ್ರಿದ್ ಹಬ್ಬದಂದು 2 ಕೋಟಿ × 20 = 40 ಕೋಟಿ ಜನರಿಗೆ ಆಹಾರವನ್ನು ಒದಗಿಸುತ್ತದೆ.

▪️ಬಕ್ರಿದ್‌ನ ಪ್ರಮುಖ ಆರ್ಥಿಕ ಪ್ರಯೋಜನಗಳು:
ವ್ಯಾಪಾರ: 4 ಲಕ್ಷ ಕೋಟಿ ರೂ.
ಉಚಿತ ಆಹಾರ: 40 ಕೋಟಿ ಜನರಿಗೆ
ಉದ್ಯೋಗ: 20 ಲಕ್ಷ ಜನರಿಗೆ
ಈ ಲೆಕ್ಕವನ್ನು ಕನಿಷ್ಠ ಅಂದಾಜಿನ ಮೇಲೆ ಮಾಡಲಾಗಿದೆ. ವಾಸ್ತವವಾಗಿ ಅಂಕಿ ಸಂಖ್ಯೆಗಳು ಮೇಲಿನದಕ್ಕಿಂತ ದುಪ್ಪಟ್ಟಾಗಿರಬಹುದು.

ಸಾಕು ಜಾನುವಾರು ಗ್ರಾಮೀಣ ಭಾರತದಲ್ಲಿ ಅತ್ಯಂತ ಲಿಕ್ವಿಡ್ ಆಸ್ತಿಯಾಗಿವೆ ಮತ್ತು ದೇಶದಲ್ಲಿ ಉದ್ಯೋಗವನ್ನು ಹೆಚ್ಚಿಸಲು ಒಕ್ಕೂಟ ಸರಕಾರ ಅವುಗಳ ವ್ಯಾಪಾರವನ್ನು ಉತ್ತೇಜಿಸಬೇಕಿದೆ.

ಅದ್ಭುತವಾದ ಸಂಗತಿ ಎಂದರೆ ಇದು ಭಾರತದಲ್ಲಿ ಜಿಡಿಪಿ ಬೆಳವಣಿಗೆ ಮತ್ತು ಉದ್ಯೋಗ ನಿರ್ಮಾಣಕ್ಕೆ ಪ್ರಮುಖ ಕೊಡುಗೆ ನೀಡುವ ಕ್ಷೇತ್ರಗಳಲ್ಲಿ ಒಂದಾಗಿದೆ.

“ಈ ಹಬ್ಬವನ್ನು ಆಚರಿಸಬಾರದು” ಎಂದು ಹೇಳುವ ಜನರು ದಯವಿಟ್ಟು ಇದರಿಂದಾಗುವ ವ್ಯಾಪಾರ ದಷ್ಟಿಕೋನಗಳು ಮತ್ತು ಉದ್ಯೋಗದ ಹೆಚ್ಚಳದ ಕಡೆ ನೋಡಬೇಕು.

ಉದ್ಯೋಗ ನಿರ್ಮಾಣ ಮತ್ತು ಜಿಡಿಪಿ ಬೆಳವಣಿಗೆಯ ಬಗ್ಗೆ ಸರಕಾರ ಗಂಭೀರವಾಗಿ ಚಿಂತಿಸುವದಾದಲ್ಲಿ ಇಂತಹ ಗ್ರಾಮೀಣ ಕೃಷಿಯಾಧಾರಿತ ವ್ಯಾಪಾರವನ್ನು ಉತ್ತೇಜಿಸಬೇಕಿದೆ.

ಡಾ ಜೆ ಎಸ್ ಪಾಟೀಲ್