ಬೆಂಗಳೂರಿನಲ್ಲಿ ಮಾಸ್ಕ್ ರಹಿತ ಸುತ್ತಾಟ: ಒಂದೇ ದಿನದಲ್ಲಿ 51 ಸಾವಿರ ರೂ. ದಂಡ!

0
383

ಸನ್ಮಾರ್ಗ ವಾರ್ತೆ

ಬೆಂಗಳೂರು ,ಮೇ.3: ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಿದವರಿಂದ ಬಿಬಿಎಂಪಿ ಮಾರ್ಷಲ್ ಗಳು ಶನಿವಾರ ಒಂದೇ ದಿನ ಬರೋಬ್ಬರಿ ರೂ.51 ಸಾವಿರ ದಂಡ ವಸೂಲಿ ಮಾಡಿದ್ದಾರೆ.

ನಿನ್ನೆ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ ಬಿಬಿಎಂಪಿ ಮಾರ್ಷಲ್ ಗಳು ಎಂಟು ವಲಯದಲ್ಲಿ 86 ಮಂದಿಗೆ ರೂ.51,700 ದಂಡ ವಿಧಿಸಲಾಗಿದೆ. ಯಲಹಂಕ ವಲಯದಲ್ಲಿ ಯಾವುದೇ ದಂಡ ವಿಧಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೊದಲು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ ಮೊದಲ ದಿನವಾದ ಶುಕ್ರವಾರ ಕೇವಲ ನಾಲ್ಕು ಮಂದಿಯಿಂದ ರೂ.2,600 ದಂಡ ವಸೂಲಿ ಮಾಡಲಾಗಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ದಂಡ ಸಂಗ್ರಹಿಸುವ ಉದ್ದೇಶದಿಂದ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿಲ್ಲ ಬದಲಾಗಿ, ಕೊರೋನಾ ಸೋಂಕು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಉದ್ಯೋಗದ ಸ್ಥಳಗಳಲ್ಲಿ ಜನ ಮಾಸ್ಕ್ ಧರಿಸುವಂತಾಗಬೇಕು. ಈ ನಿಯಮ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗುತ್ತಿದೆ ಎಂದರು.

ಓದುಗರೇ, sanmarga ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ