ಬಂಗ್ಲೆಗುಡ್ಡೆ ದುರಂತ: ಮೃತರ ಕುಟುಂಬವನ್ನು ಭೇಟಿಯಾಗಿ ಪರಿಹಾರ ಧನ ನೀಡಿದ ಜಮಾಅತೆ ಇಸ್ಲಾಮಿ ಹಿಂದ್

0
604

ಸನ್ಮಾರ್ಗ ವಾರ್ತೆ

ಮಂಗಳೂರು, ಜುಲೈ 10-

ಇತ್ತೀಚೆಗೆ ಬಂಗ್ಲೆಗುಡ್ಡೆಯಲ್ಲಿ ಭೂ ಕುಸಿತದಿಂದ ಎರಡು ಮನೆಗಳ ಧರಾಶಾಹಿಯಾಗಿ, 4 ಮನೆಗಳು ಸಂಪೂರ್ಣ ಹಾನಿಗೊಂಡು, ಇಬ್ಬರು ಮಕ್ಕಳು ಜೀವಂತ ಸಮಾಧಿಯಾದ ದುರಂತ ಸ್ಥಳಕ್ಕೆ ಜಮಾಅತ್ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು. ಮಕ್ಕಳನ್ನು ಕಳಕೊಂಡು ದುಃಖದ ಮಡುವಿನಲ್ಲಿ ನೋವನ್ನು ಅನುಭವಿಸುತ್ತಿರುವ ತಂದೆ ಶರೀಫರನ್ನು ಅವರ ಸಂಬಂಧಿಕರೋರ್ವರ ಮನೆಯಲ್ಲಿ ಭೇಟಿಯಾಗಿ ಸಾಂತ್ವನ ಹೇಳಿತು.

ಅಲ್ಲಾಹನ ವಿಧಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಯಾವುದೇಪರೀಕ್ಷಾ ಘಟ್ಟದಲ್ಲೂ ನಾವು ಅಲ್ಲಾಹನೊಂದಿಗೆ ಅಭಯ ಯಾಚಿಸುತ್ತಾ ಸಹನೆಯೊಂದಿಗೆ ವರ್ತಿಸಬೇಕು. ಮೃತ ಮಕ್ಕಳೊಂದಿಗೆ ನಾಳೆ ಸ್ವರ್ಗ ಲೋಕದಲ್ಲಿ ಒಂದುಗೂಡಲು ಅಲ್ಲಾಹನು ಕರುಣಿಸಲಿ ಎ೦ದು ತಂಡದಲ್ಲಿದ್ದ ಮೌಲಾನಾ ಯಹ್ಯಾ ತಂಗಳ್ ಮದನಿ ಕುಟುಂಬಸ್ಥರನ್ನು ಸಂತೈಸಿ ಪ್ರಾರ್ಥಿಸಿದರು.

ಮಕ್ಕಳನ್ನು ಕಳಕೊಂಡ ಶರೀಫರಿಗೆ ಮತ್ತು ಮನೆ ಕಳಕೊಂಡ ಮಾಮು ಬ್ಯಾರಿಯವರ ಮಗ ಮುಬಾರಕ್ ರಿಗೆ ಜಮಾಅತ್ ತಂಡ ತಾತ್ಕಾಲಿಕ ಪರಿಹಾರಧನವನ್ನು ವಿತರಿಸಿತು.

ಜಮಾಅತ್ ತಂಡದಲ್ಲಿ ಮಂಗಳೂರು ವಲಯ ಸಂಚಾಲಕರು, ದ.ಕ ಜಿಲ್ಲಾ ಸಂಚಾಲಕ ಸಈದ್ ಇಸ್ಮಾಯಿಲ್, ಸ್ನೇಹ ಪಬ್ಲಿಕ್ ಸ್ಕೂಲ್ ಚೇರ್ ಮ್ಯಾನ್ ಯೂಸುಫ್ ಪಕ್ಕಲಡ್ಕ, ವಾಮಂಜೂರು ಅಲ್ ಹಮ್ದ್ ಸಂಸ್ಥೆಯ ಅಬ್ದುಲ್ ಖಾದರ್ ಹಾಜಿ ಮತ್ತು  ಆಲಿಯಬ್ಬ ಹಾಗೂ ಎಡಪದವಿನ ಜಮಾಅತ್ ಬಂಧುಗಳಾದ ಇಸ್ಮಾಯಿಲ್ ಕಲ್ಲಾಡಿ, ಮುನೀರ್ ಪದರಂಗಿ, ಶರೀಫ್ ಕುಪ್ಪೆಪದವು ಇದ್ದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.