ಬನ್ನಾ, ಮೌದೂದಿ ನಿಲುವಿನ ಪುನರ್ಚಿಂತನೆ ಅಗತ್ಯವಿದೆಯೇ?

0
124

ಸನ್ಮಾರ್ಗ ವಾರ್ತೆ

✍️ ಅಬ್ದುಸ್ಸಲಾಮ್ ವಾಣಿಯಂಬಲಮ್

ಇಂತಹ ಹಲವಾರು ಪ್ರಶ್ನೆಗಳು ಜೀವಂತವಾಗಿವೆ. ಧರ್ಮವನ್ನು ಕಾಲಕ್ಕನುಗುಣವಾಗಿ ಪ್ರಸ್ತುತಪಡಿಸುವ ಹೊಣೆಗಾರಿಕೆಯಿರುವ ಇಸ್ಲಾಮೀ ಸಂಘಟನೆಗೆ ಅದು ಸಾಧ್ಯವಾಗಬೇಕಿದ್ದರೆ ಅದು ನಿರಂತರ ಸ್ವಯಂ ತಜ್ದೀದ್‌ಗೊಳಗಾಗಬೇಕು. ಅದರ ಸಿದ್ಧಾಂತಗಳನ್ನು ಕಾಲಕ್ಕನುಗುಣವಾಗಿ ನವೀಕರಿಸದೆ ಧರ್ಮವನ್ನು ನವೀಕರಿಸಲು ಸಾಧ್ಯವಾಗದು. ಎರಡಕ್ಕೂ ಬಹಳಷ್ಟು ಮಹತ್ವದ ಸಂಬಂಧವಿದೆ.

ಹತ್ತೊಂಬತ್ತನೇ ಶತಮಾನದಂತೆ ಜನರ ವಾಸವು ಬದುಕು ಇಪ್ಪತ್ತನೇ ಶತಮಾನದಲ್ಲಿಲ್ಲ. ಇಪ್ಪತ್ತೊಂದನೇ ಶತಮಾನದಲ್ಲಿ ಮತ್ತೂ ಬದಲಾವಣೆಯನ್ನು ಅಲ್ಲಾಹನು ತಂದಿರುತ್ತಾನೆ. ಆದ್ದರಿಂದ ಇಪ್ಪತ್ತನೇ ಶತಮಾನದಲ್ಲಿ ಸ್ಥಾಪಿಸಲಾದ ಸಂಘಟನೆಗೆ 21ನೇ ಶತಮಾನದಲ್ಲಿ ಅದೇ ಕಾರ್ಯತಂತ್ರವನ್ನು ಬಳಸಲಾಗದು. ಕಾಲಕ್ಕನುಗುಣವಾಗಿ ಬದಲಾವಣೆ ಎಂಬುದು ಅಲ್ಲಾಹನ ಧರ್ಮವಾದ ಇಸ್ಲಾಮಿಗೆ ಬಾಧಕವಾಗಿರುವಾಗ ಮನುಷ್ಯರು ಸ್ಥಾಪಿಸಿದ ಇಸ್ಲಾಮೀ ಸಂಘಟನೆಗೆ ಏಕೆ ಬಾಧಕವಾಗದಿರದು.

ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದ ಮುಜದ್ದಿದ್‌ಗಳ ದೌತ್ಯವಾಗಿರಲಿಲ್ಲ ಇಪ್ಪತ್ತನೇ ಶತಮಾನದ ಸುಧಾರಕರಾದ ಇಮಾಮ್ ಹಸನುಲ್ ಬನ್ನಾ ನಿರ್ವಹಿಸಿದ್ದು. ಎಲ್ಲರ ಸಿದ್ಧಾಂತಗಳು ಒಂದೇ ಹಾದಿಯಲ್ಲಿತ್ತು ಎಂಬುದು ಸರಿ. ಸಹಜವಾಗಿ ಅದರ ತಳಹದಿ ಇಸ್ಲಾಮ್ ಆಗಿರುವಾಗ ಹಾಗೆಯೇ ಇರಬೇಕು. ಆದರೆ ಅದರ ಧೋರಣೆ ಕಾರ್ಯಕ್ರಮಗಳಲ್ಲಿ ಬದಲಾವಣೆಯಿತ್ತು. ಅದರ ಕಾರ್ಯತಂತ್ರದಲ್ಲಿ ಬದಲಾವಣೆಯಿತ್ತು. ಜಮಾಲುದ್ದೀನ್ ಅಫ್ಘಾನೀ, ಮುಹಮ್ಮದ್ ಅಬು, ರಶೀದ್ ರಿಝಾ ಮುಹಮ್ಮದ್ ಬಿನ್ ಅಬ್ದುಲ್ ವಹಾಬ್‌ರಿಗಿಂತ ಭಿನ್ನವಾಗಿ ಹಸನುಲ್ ಬನ್ನಾ ಮತ್ತು ಮೌದೂದಿಯವರ ದೌತ್ಯ ಮುಂದೆ ಸಾಗಿ ಅವರು ಮುಜದ್ದಿದ್‌ಗಳಾದರು. ಬನ್ನಾ, ಮೌದೂದಿಯವರಿಗೆ ಅಫ್ಘಾನೀ ಮತ್ತು ಅಬ್ದುಲ್ ವಹಾಬ್‌ರ ಧೋರಣೆಯಲ್ಲಿ ನಿಲ್ಲವಂತಿರಲಿಲ್ಲ. ಕಾರ್ಯ ತಂತ್ರದಲ್ಲಿ ಬದಲಾವಣೆ ಬೇಕಿತ್ತು. ಯಾಕೆಂದರೆ ಅದು ಹತ್ತೊಂಬತ್ತನೇ ಶತಮಾನವಾಗಿರಲಿಲ್ಲ. ಇಪ್ಪತ್ತನೇ ಶತಮಾನವಾಗಿತ್ತು.

ನಾವು ಹಿಂದೆ ಹೇಳಿರುವಂತೆ ಈ ಕಾರಣಗಳಿಂದ ಪ್ರತೀ ನೂರು ವರ್ಷದಲ್ಲಿ ಮುಜದ್ದಿದ್ ಎಂಬ ತತ್ವವನ್ನು ಇಸ್ಲಾಮ್ ಮುಂದಿರಿಸಿದೆ. ವ್ಯಕ್ತಿಗತವಾಗಿ ಮುಜದ್ದಿದ್‌ಗಳಿಗೆ ಬಾಧಕವಾದದ್ದು ತಜ್ದೀದೀ ಸಂಘಟನೆಗಳಿಗೂ ಬಾಧಕವಾಗಿದೆ. ವ್ಯಕ್ತಿಗಳಂತೆ ಸಂಘಟನೆಯೂ ಆಗಿದೆ. ಅದಕ್ಕೂ ಶೈಶವ, ಬಾಲ್ಯ, ಯೌವನ ಮುಪ್ಪು ಇರುತ್ತದೆ. ಮುಪ್ಪು ಬಂದ ಬಳಿಕ ಮರಣವಾಗಿದೆ. ಇಪ್ಪತ್ತನೇ ಶತಮಾನದಲ್ಲಿ ಸ್ಥಾಪಿತವಾದ ತಜ್ದೀದೀ ಸಂಘಟನೆಗಳಿಗೆ ನೂರುವರ್ಷ ತುಂಬುತ್ತಿದೆ, 1920ರಲ್ಲಿ ಹಸನುಲ್ ಬನ್ನಾ ತನ್ನ ಆಂದೋಲನವನ್ನು ಪ್ರಾರಂಭಿಸಿದರು.

ಮೌದೂದಿಯವರು 1941ರಲ್ಲಿ ತನ್ನ ಆಂದೋಲನ ಸ್ಥಾಪಿಸಿದರೂ ಅದರ ಕಾರ್ಯತಂತ್ರದ ಆರಂಭ 1920ರಲ್ಲಿಯೇ ಆಗಿತ್ತು. ಈ ಅರ್ಥದಲ್ಲಿ ಈಗ ಎರಡೂ ಸಂಘಟನೆಗಳಿಗೂ ನೂರು ವರ್ಷ ತುಂಬುತ್ತಿದೆ. ಈ ಬಗ್ಗೆ ಕೆಲ ಕುತೂಹಲಕರವಾದ ಚಿಂತನೆಯನ್ನು ಕೆಲವರು ನಡೆಸಿದ್ದಾರೆ. ಪ್ರತೀ ನೂರು ವರ್ಷದಲ್ಲಿ ತಜ್ದೀದ್ ನಡೆಯುತ್ತದೆ ಎಂಬ ಪ್ರವಾದಿ ವಚನದ ಬೆಳಕಿನಲ್ಲಿ ಇಪ್ಪತ್ತನೇ ಶತಮಾನದಲ್ಲಿ ಉದಯಿಸಿದ ತಜ್ದೀದಿ ಸಂಘಟನೆಗಳ ಆಯಸ್ಸು ಮುಗಿಯುತ್ತಾ ಬಂತೆಂದೂ ಮುಂದಿನ ಮುಜದ್ದಿದ್‌ಗೆ ಅದು ದಾರಿ ಬಿಟ್ಟು ಕೊಡಬೇಕೆಂದೂ ಆ ಚಿಂತನೆಯಲ್ಲಿ ಹೇಳಲಾಗಿದೆ. ಅದನ್ನು ನಮಗೆ ತಿರಸ್ಕರಿಸಬಹುದು. ಯಾಕೆಂದರೆ ಸಂಘಟನೆಯೆಂದರೆ ವ್ಯಕ್ತಿಯಲ್ಲ. ವ್ಯಕ್ತಿಯ ಮರಣಾ ನಂತರವೂ ಅದು ನೆಲೆ ನಿಂತಿರುತ್ತದೆ. ಆದರೆ ಅದರ ನೆಲೆ ನಿಲ್ಲುವಿಕೆಯನ್ನು ಸಾಬೀತು ಪಡಿಸಲು ಕೆಲವು ತಜ್ದೀದ್‌ಗೆ ಒಳಗಾಗಲೇಬೇಕು. ಇಲ್ಲವಾದರೆ ಅದು ನೂರು ವರ್ಷಕ್ಕಿಂತ ಹೆಚ್ಚು ಕಾಲ ಬಾಳದೆ ವ್ಯಕ್ತಿಗಳಂತೆ ನಾಮಾವಶೇಷವಾಗುವುದು.

ಈ ಚಿಂತನಾರ್ಹವಾದ ವಾಸ್ತವವನ್ನು ಇಸ್ಲಾಮೀ ಸಂಘಟನೆಗಳು ಎದುರಿಸಬೇಕಾಗಿ ಬರಬಹುದು. ಸಂಘಟನಾ ಬದ್ಧವಾದ ಶಿಸ್ತು ನಿಯಮಗಳು, ಚಟುವಟಿಕಾ ರಂಗದ ಸಂದರ್ಭದಲ್ಲಿನ ಒತ್ತಡಗಳ ಕಾರಣದಿಂದ ಬದಲಾವಣೆ ತರಲು ಸಾಧ್ಯವಾಗದೇ ಹೋದರೆ ಅದು ಸಂಘಟನೆಗೂ ಆ ಮೂಲಕ ಇಸ್ಲಾಮಿಗೂ ಮಾರಕವಾದ ಹೊಡೆತ ಬೀಳಬಹುದು. ಒಂದು ಸಂಘಟನೆಗೆ ಅದರದ್ದೇ ಆದ ರೂಪೀಕರಣದ ಸಂದರ್ಭಗಳುಂಟಾಗಬಹುದು. ಆ ಸಂದರ್ಭದಲ್ಲಿ ಬದಲಾವಣೆಯುಂಟಾದಾಗ ಬದಲಾದ ಸಂದರ್ಭಾನುಸಾರ ಸಂಘಟನೆಯನ್ನು ಅಪ್ಡೇಟ್ ಮಾಡಿದರೆ ಮಾತ್ರ ಆ ಸಂಘಟನೆಗೆ ಭಯವಿರುವುದು. ಮೌಲಾನಾ ಅಬುಲ್ ಆಲಾ ಮೌದೂದಿಯವರೇ ಈ ವಾಸ್ತವವನ್ನು ಸ್ಪಷ್ಟಪಡಿಸಿದ್ದಾರೆ.

“ಓರ್ವ ನಿಜವಾದ ನಾಯಕ ಮತ್ತು ಸುಧಾರಕನ ವ್ಯಾಖ್ಯಾನ ಇದಾಗಿರಬೇಕು. ಅವರು ಇಜ್ತಿಹಾದ್ ನಡೆಸಿ ಚಿಂತಿಸಿ ಸಕ್ರಿಯರಾಗಿರುತ್ತಾರೆ. ಸಮಯ ಸಂದರ್ಭ ನೋಡಿ ಯಾವುದು ಪ್ರಸ್ತುತವೋ ಆ ಮಾರ್ಗವನ್ನು ಅವರು ಆರಿಸಿ ಅವಲಂಭಿಸುತ್ತಾರೆ. ಅವರ ಬೆಂಬಲಿಗರು ಕೇವಲ ಅವರನ್ನು (ಮುಕಲ್ಲಿದ್) ಅನುಸರಿಸುತ್ತಾರೆ. ನಾಯಕ ಆ ಸಂದರ್ಭವನ್ನು ಮುಂದಿರಿಸಿ ಯಾವ ಮಾರ್ಗವನ್ನು ಸ್ವೀಕರಿಸುವರೋ ಆ ಮಾರ್ಗದ ಕಾಲವು ಕೊನೆಗೊಂಡಿದೆ ಎಂದಿರುವಾಗ ಕಣ್ಣು ಮುಚ್ಚಿಕೊಂಡು ಸಂಚರಿಸುತ್ತಿರುತ್ತಾರೆ. ಗತ ಕಾಲದಲ್ಲಿ ಯಾವುದು ಅತ್ಯಂತ ಪ್ರಸ್ತುತವೋ ಅದು ನಂತರದ ಕಾಲದಲ್ಲಿ ತೀರಾ ಅಪ್ರಸ್ತುತವಾಗಿರುವ ಬಗ್ಗೆ ಅವರು ಚಿಂತಿಸುವುದಿಲ್ಲ. ಕಳೆದ ಶತಮಾನದ ನಾಯಕರ ಇಹಲೋಕ ತ್ಯಾಗದ ನಂತರ ಅವರ ಅನುಯಾಯಿಗಳು ಇಂದಿಗೂ ಅದೇ ನಿಲುವಿನಲ್ಲಿ ಗಟ್ಟಿಯಾಗಿ ನಿಂತಿರುತ್ತಾರೆ. ವಾಸ್ತವದಲ್ಲಿ ಹಳೆಯ ಕಾಲ ಕಳೆದು ಹೋಗಿದೆ. ಈಗ ಪುನರ್ಚಿಂತನೆ ನಡೆಸಿ ಇಜ್ತಿಹಾದ್ ನಡೆಸಿ ಹೊಸ ದಾರಿಯನ್ನು ಹುಡುಕುವುದು ಅನಿವಾರ್ಯವಾಗಿದೆ.”
[ಸಶೇಷ]