BBC ಈದ್ ವರದಿಯಲ್ಲಿ ‘ರಿವರ್ಟ್’ ಪದ ಬಳಕೆ; ಇಸ್ಲಾಂ ಪ್ರಚಾರದಲ್ಲಿ ತೊಡಗಿದೆಯೇ ಎಂದು ಗರಂ ಆದ ಬಲಪಂಥೀಯರು

0
650

ಸನ್ಮಾರ್ಗ ವಾರ್ತೆ

BBC ಇತ್ತೀಚಿನ ತನ್ನ ಈದ್ ಹಬ್ಬದ ಒಂದು ವರದಿಯಲ್ಲಿ ಮುಸ್ಲಿಮರಾಗಿ ಧರ್ಮ ಪರಿವರ್ತನೆ ಗೊಂಡವರನ್ನು ಉಲ್ಲೇಖಿಸುವಾಗ “ರಿವರ್ಟ್ಸ್” (ಮರಳಿದವರು) ಎಂಬ ಪದವನ್ನು ಬಳಸಿದ್ದಕ್ಕಾಗಿ ಬಲಪಂಥೀಯರ ಟೀಕೆಗಳಿಗೆ ಗುರಿಯಾಗಿದೆ. ಲಂಡನ್ ಮೂಲದ ರಾಷ್ಟ್ರೀಯ ಪ್ರಸಾರ ಕಂಪನಿಯು(BBC) ಇಸ್ಲಾಮ್ ಧರ್ಮ ಪ್ರಚಾರ ಮಾಡುತ್ತಿದೆ ಎಂಬ ಆರೋಪಗಳು ಎದ್ದಿವೆ.

ರಮದಾನ್ ಕೊನೆಯಲ್ಲಿ ಮುಸ್ಲಿಂ ಹಬ್ಬ ಈದ್ ಬಗ್ಗೆ ಬಿಬಿಸಿ ನ್ಯೂಸ್ನಲ್ಲಿ ಪ್ರಕಟವಾದ ಲೇಖನದಾದ್ಯಂತ ಈ ರಿವರ್ಟ್ ಎಂಬ ಪದವನ್ನು ಬಳಸಲಾಗಿತ್ತು. ಬಲಪಂಥೀಯ ಸಂಸದ ಮತ್ತು ಮಾಜಿ ಭದ್ರತಾ ಮಂತ್ರಿ ಟಾಮ್ ಟುಜೆಂಡ್ಹ್ಯಾಟ್ ಈ ಪದ ಬಳಕೆಯನ್ನು ಖಂಡಿಸಿದ್ದಾರೆ. ಮತಾಂತರಗೊಂಡವರನ್ನು ‘ರಿವರ್ಟ್ಸ್’ ಎಂದು ಕರೆಯುವುದು ವಾಸ್ತವವಲ್ಲ ಎಂದು ಹೇಳಿದ್ದಾರೆ. ನಾವೆಲ್ಲರೂ ‘ಮೂಲತಃ’ ಮುಸ್ಲಿಮರು ಎಂದು ಹೇಳುವುದು ಮತ್ತು ಮತಾಂತರಗೊಂಡವರು ತಮ್ಮ ನಂಬಿಕೆಯನ್ನು ಮರುಪಡೆಯುತ್ತಿದ್ದಾರೆಂದು ಹೇಳುವುದು ಇಸ್ಲಾಮಿಸ್ಟ್ ಪ್ರಚಾರವಾಗಿದೆ. ಇದು ಬಿಬಿಸಿಯಲ್ಲಿ ಸ್ಥಾನವನ್ನು ಪಡೆಯಬಾರದು, ನಾನು ಧಾರ್ಮಿಕ ಭಾಷೆಗೆ ವಿರೋಧಿಸುವುದಿಲ್ಲ, ಆದರೆ ಇದು ಸೂಕ್ತ ಪದವೆಂದು ಬಿಬಿಸಿ ಹೇಳುವುದನ್ನು ವಿರೋಧಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಇದೀಗ ಟೀಕೆಗಳ ನಂತರ ಶನಿವಾರದಂದು ಲೇಖನವನ್ನು ಸಂಪಾದಿಸಿದ ಬಿಬಿಸಿ “ರಿವರ್ಟ್” ಪದದ ಹೆಚ್ಚಿನ ಬಳಕೆಯನ್ನು ತೆಗೆದುಹಾಕಿದೆ. ಆರಂಭದಲ್ಲಿ ಶೀರ್ಷಿಕೆ ಮತ್ತು ಉಲ್ಲೇಖಗಳಲ್ಲಿ ಮಾತ್ರ ಈ ಪದವನ್ನು ಉಳಿಸಿಕೊಳ್ಳಲಾಗಿತ್ತು. ಆದರೆ ನಂತರದ ಸಂಪಾದನೆಯಲ್ಲಿ ಶೀರ್ಷಿಕೆಯಲ್ಲಿಯೂ “ರಿವರ್ಟ್ಸ್” ಪದವನ್ನು “ಕನ್ವರ್ಟ್ಸ್” (ಮತಾಂತರಗೊಂಡವರು) ಎಂದು ಬದಲಾಯಿಸಲಾಗಿದೆ.

ಬಿಬಿಸಿಯ ಮೂಲ ಲೇಖನವು ಈದ್ ಹಬ್ಬದ ಸಮಯದಲ್ಲಿ ಹೊಸದಾಗಿ ಇಸ್ಲಾಮ್ ಅನ್ನು ಅಂಗೀಕರಿಸಿದವರ (ನ್ಯೂ ಮುಸ್ಲಿಮ್ಸ್) ಅನುಭವಗಳು ಮೇಲೆ ಕೇಂದ್ರೀಕರಿಸಿತ್ತು. ಸಾಮಾನ್ಯವಾಗಿ ಈದ್ ಹಬ್ಬವನ್ನು ಕುಟುಂಬದೊಂದಿಗೆ ಕಳೆಯಲಾಗುತ್ತದೆ. ಆದರೆ ಮತಾಂತರಗೊಂಡವರು ತಮ್ಮ ಹಿಂದಿನ ಕುಟುಂಬ ಮತ್ತು ಸಮುದಾಯದಿಂದ ದೂರವಾಗಿ ಏಕಾಂತತೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಪ್ರಾರ್ಥನೆ ಮತ್ತು ಹಬ್ಬದ ಸಂಪ್ರದಾಯಗಳಿಗೆ ಹೊಸದಾಗಿ ಹೊಂದಾಣಿಕೆಯಾಗುವುದು ಅವರಿಗೆ ಕಷ್ಟಕರವಾಗುತ್ತಿದೆ ಎಂಬುದರ ಬಗ್ಗೆ ಆಗಿತ್ತು ವರದಿ. ಲಂಡನ್ನಿನ “ನ್ಯೂ ಮುಸ್ಲಿಮ್ ಸರ್ಕಲ್” ಎಂಬ ಸಂಸ್ಥೆಯು ಹೊಸ ಮುಸ್ಲಿಮರಿಗೆ ಬೆಂಬ ನೀಡುವಲ್ಲಿ ಗಮನಾರ್ಹ ಪಾತ್ರ ನಿರ್ವಹಿಸುತ್ತಿದೆ ಎಂದೂ ಲೇಖನದಲ್ಲಿ ಉ
ಉಲ್ಲೇಖಿಸಲಾಗಿತ್ತು.