ನಾಲ್ಕು ವರ್ಷದಿಂದ ಹಾಸಿಗೆ ಹಿಡಿದಿದ್ದ ರೋಗಿಗೆ ಮರುಜೀವನ ನೀಡಿದ ಕೊರೋನ ಲಸಿಕೆ: ಮಾತಾಡಲು, ನಡೆಯಲು ಶಕ್ತಿ ಬಂತು…

0
238

ಸನ್ಮಾರ್ಗ ವಾರ್ತೆ

ಜಾರ್ಖಂಡ್: ನಾಲ್ಕು ವರ್ಷದಿಂದ ಹಾಸಿಗೆ ಹಿಡಿದಿದ್ದ ಜಾರ್ಖಂಡ್‌ನ ಬೊಕೊರೊ ನಿವಾಸಿ 44ವರ್ಷದ ದುಲಾರ್ ಚಂದ್‍ರಿಗೆ ಕೊರೊನ ವ್ಯಾಕ್ಸಿನ್ ಚುಚ್ಚಿದ ಪರಿಣಾಮವಾಗಿ ಎದ್ದು ನಡೆಯುವಂತಾಗಿದೆ. ಅವರು ನಾಲ್ಕು ವರ್ಷದ ಹಿಂದೆ ನಡೆದ ಅಪಘಾತದಲ್ಲಿ ಮಾತಾಡುವ ಮತ್ತು ನಡೆದಾಡುವ ಶಕ್ತಿ ಕಳಕೊಂಡಿದ್ದರು. ಜನವರಿ 4ರಂದು ಕೊವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಹಾಕಲಾಗಿತ್ತು. ನಂತರ ದುಲಾರ್ ಚಂದ್‍ರಲ್ಲಿ ಬದಲಾವಣೆ ಕಾಣತೊಡಗಿತು. ವ್ಯಾಕ್ಸಿನ್ ತೆಗದುಕೊಂಡ ಒಂದೇ ದಿವಸವೇ ಅವರ ದೇಹ ಪ್ರತಿಕ್ರಿಯಿಸಲು ಆರಂಭಿಸಿತು. ಎರಡು-ಮೂರು ದಿನಗಳಲ್ಲಿ ಮಾತನಾಡಲು ಶಕ್ತರಾದರು. ನಿಧಾನವಾಗಿ ನಡೆಯಲು ತೊಡಗಿದರು ಎಂದು ಪೆಟಾರ್ ವಾರ್ ಕಮ್ಯುನಿಟಿ ಹೆಲ್ತ್ ಸೆಂಟರಿನ ವೈದ್ಯ ಅಲ್‍ಬಲ್ ಕೊರ್‍ಕೆಟ್ ಹೇಳಿದರು.

ವ್ಯಾಕ್ಸಿನ್ ತೆಗೆದುಕೊಂಡಿದ್ದಕ್ಕೆ ಸಂತೋಷವಾಗಿದೆ. ಜನವರಿ ನಾಲ್ಕಕ್ಕೆ ವ್ಯಾಕ್ಸಿನ್ ಸ್ವೀಕರಿಸಿದೆ. ಆನಂತರವೇ ನನಗೆ ನಡೆಯಲು ಆಗಿದ್ದು ಎಂದು ದುಲಾರ್ ಚಂದ್ ಹೇಳಿದರು. ದುಲಾರ್‌ರಲ್ಲಾದ ಬದಲಾವಣೆ ಆಶ್ಚರ್ಯದ್ದು ಇದನ್ನು ವೈದ್ಯಕೀಯ ತಂಡ ಅಧ್ಯಯನ ನಡೆಸಲಿದೆ ಎಂದು ಸರ್ಜನ್ ಜೀತೇಂದರ್ ತಿಳಿಸಿದ್ದಾರೆ.