ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ನಿಂದ ಟಿಕೇಟ್ ಮಾರಾಟ: ಪ್ರಿಯಾಂಕ ಮೌರ್ಯ ಆರೋಪ

0
189

ಸನ್ಮಾರ್ಗ ವಾರ್ತೆ

ಲಕ್ನೊ: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ಮೊದಲ ಅಭ್ಯರ್ಥಿಗಳ ಪಟ್ಟಿಯಿಂದ ಹೊರಗಿಡಲಾದ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಹಣ ಸ್ವೀಕರಿಸಿ, ಜಾತಿ ನೋಡಿ ಕಾಂಗ್ರೆಸ್ ಹಂಚುತ್ತಿದೆ ಎಂದು ಪ್ರಿಯಾಂಕಾ ಮೌರ್ಯ ಆರೋಪಿಸಿದ್ದಾರೆ. ಉತ್ತರಪ್ರದೇಶದ ಕಾಂಗ್ರೆಸ್‍ನ ‘ನಾನು ಹೆಣ್ಣು ನನಗೂ ಹೋರಾಡಲು ಸಾಧ್ಯವಿದೆ’ ಎಂಬ ಅಭಿಯಾನದ ಪ್ರಚಾರಕ್ಕೆ ತನ್ನನ್ನು ಬಳಸಿಕೊಂಡು ಓಬಿಸಿ ಕ್ಯಾಟಗರಿಗೆ ಸೇರಿದ ತನಗೆ ಟಿಕೇಟು ನೀಡಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರನ್ನು ಪ್ರಿಯಾಂಕ ಮೌರ್ಯ ಟೀಕಿಸಿದ್ದು, ಪ್ರಚಾರಕ್ಕೆ ತನ್ನನ್ನು ಬಳಸಿಕೊಳ್ಳಲಾಗಿದೆ ಆದರೆ ಅಭ್ಯರ್ಥಿಯಾಗಿ ಬೇರೆಯವರಿಗೆ ಟಿಕೇಟು ಕೊಡಲಾಯಿತು ಎಂದು ಆರೋಪಿಸಿದರು. ಕ್ಷೇತ್ರದಲ್ಲಿ ಕಠಿಣ ಪರಿಶ್ರಮ ನಡೆಸಿದರೂ ಉತ್ತರಪ್ರದೇಶ ಚುನಾವಣೆಯಲ್ಲಿ ಟಿಕೆಟ್ ಸಿಗದ ಸಂಕಟ ನನಗಿದೆ. ನಾನು ಹೆಣ್ಣು ನನಗೂ ಹೋರಾಡಲು ಗೊತ್ತು ಎಂಬ ಅಭಿಯಾನದಲ್ಲಿ ನನ್ನ ಮುಖವನ್ನು ಕಾಂಗ್ರೆಸ್ ಉಪಯೋಗಿಸಿತು. ಆದರೆ ಟಿಕೆಟ್‍ಗೆ ಹಣ ಕೇಳಿ ನನ್ನ ಲ್ಯಾಂಡ್ ಫೋನ್‍ಗೆ ಒಂದು ಕಾಲ್ ಬಂದಿತ್ತು. ಆದರೆ, ನಾನು ಅದನ್ನು ತಿರಸ್ಕರಿಸಿದ್ದೇನೆ. ನಾನು ಎಲ್ಲ ಟಾಸ್ಕ್‌ಗಳನ್ನು ಪೂರ್ತಿ ಮಾಡಿದ್ದೇನೆ. ಆದರೆ ನಾಮಪತ್ರಕ್ಕೆ ಪೂರ್ವಭಾವಿಯಾಗಿ ನಿಶ್ಚಯಿಸಲಾಗಿತ್ತು. ಒಂದು ತಿಂಗಳ ಹಿಂದೆ ಪಾರ್ಟಿಗೆ ಬಂದವರಿಗೆ ಸೀಟು ಕೊಡಲಾಗಿದೆ. ಕೆಳಹಂತದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಸಲು ಪ್ರಿಯಾಂಕಾ ಗಾಂಧಿಗೆ ಸಂದೇಶ ಕಳುಹಿಸಲು ಬಯಸುತ್ತೇನೆ ಎಂದು ಮೌರ್ಯ ಹೇಳಿದರು.