ಬೆಂಗಳೂರಿನಲ್ಲಿ ಬಂಡೆಗಲ್ಲಿನ ಗಣಿಯನ್ನೇ ತಾತ್ಕಾಲಿಕ ಸ್ಮಶಾನ ಮಾಡಿದ ಅಧಿಕಾರಿಗಳು

0
406

ಸನ್ಮಾರ್ಗ ವಾರ್ತೆ

ಬೆಂಗಳೂರು: ಕೊರೋನದಿಂದ ಸತ್ತವರ ಮೃತದೇಹಗಳು ಸ್ಮಶಾನದಲ್ಲಿ ರಾಶಿ ಬೀಳತೊಡಗಿದ್ದರಿಂದ ಬಂಡೆಗಲ್ಲಿನ ಗಣಿಯನ್ನೇ ಅಧಿಕಾರಿಗಳು ತಾತ್ಕಾಲಿಕವಾಗಿ ಸ್ಮಶಾನ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮುಖ್ಯ ಏಳು ಸ್ಮಶಾನವಿದೆ. ಇಲ್ಲಿ ಮೃತದೇಹ ದಹಿಸಲು ಆಂಬುಲೆನ್ಸ್ ಗಳಲ್ಲಿ ಮೃತದೇಹಗಳು ಸಾಲು ಸಾಲಾಗಿ ಕಾಯುತ್ತಿದ್ದು, ಈ ಹಂತದಲ್ಲಿ ಬಂಡೆಗಲ್ಲಿನ ಗಣಿಯನ್ನು ಸ್ಮಶಾನವಾಗಿ ಬಳಸುವ ನಿರ್ಧಾರಕ್ಕೆ ಅಧಿಕಾರಿಗಳು ಬಂದರು ಎಂದು ವರದಿಯಾಗಿದೆ.

ಕೊರೋನ ಪೀಡಿತರ ಮೃತದೇಹ ದಹನಕ್ಕೆ ತಾತ್ಕಾಲಿಕವಾಗಿ ದೊಡ್ಡ ಕಗ್ಗಲ್ಲ ಗಣಿಯನ್ನು ಗೆದ್ದನಹಳ್ಳಿಯಲ್ಲಿ ಒಮ್ಮೆಗೆ 15 ಮೃತದೇಹ ದಹನ ಮಾಡುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದ್ದಾರೆ ಎಂದು ಬೆಂಗಳೂರು ಅರ್ಬನ್ ಜಿಲ್ಲಾ ಕಮಿಷನರ್ ಮಂಜುನಾಥ್ ಹೇಳಿದರು.

ಬೆಂಗಳೂರಿನ ಪಶ್ಚಿಮದಲ್ಲಿ ಗೆದ್ದನಹಳ್ಳಿಯ ಮತ್ತು ತಾವರೆಕೆರೆ ಇದೆ. ಗೆದ್ದನಹಳ್ಳಿಯ ಸ್ಮಶಾನದಲ್ಲಿ ಪ್ರತಿದಿನ 30ರಿಂದ 40 ಮೃತದೇಹಗಳು ಸಂಸ್ಕಾರ ಪಡೆದುಕೊಳ್ಳುತ್ತಿವೆ. ಶ್ಮಶಾನ ನಿಯಂತ್ರಣ ನಿರ್ವಹಣೆಗೆ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಮೃತಪಟ್ಟವರ ಸಂಬಂಧಿಕರಿಗಾಗಿ , ಕುಡಿಯುವ ನೀರಿನ ಸೌಕರ್ಯ , ಟಾಯ್ಲೆಟ್ ನ ಸೌಕರ್ಯ ಮಾಡಲಾಗಿದೆ. ಆದರೆ ಸರಿಯಾದ ವಿಶ್ರಾಂತಿಯ ವ್ಯವಸ್ಥೆ ಇಲ್ಲದ್ದರಿಂದ ಜನರಿಗೆ ತುಂಬ ಕಷ್ಟ ಆಗುತ್ತಿದೆ ಎಂದು ಶ್ಮಶಾನ ನಿರ್ವಾಹಕ ಸುರೇಶ್ ಹೇಳಿದ್ದಾರೆ.

ಕಳೆದ ಮೂರು ವಾರಗಳಿಂದ 24 ಗಂಟೆಯೂ ಬೆಂಗಳೂರಿನ ಏಳು ಸ್ಮಶಾನಗಳು ಕಾರ್ಯ ನಿರ್ವಹಿಸುತ್ತಿವೆ. ಶನಿವಾರ ರಿಪೇರಿ ಇತ್ಯಾದಿ ಕಾರಣದಿಂದ ಒಂದು ಸ್ಮಶಾನ ಬಂದ್ ಇತ್ತು. ಶುಕ್ರವಾರ 346 ಮಂದಿ ಬೆಂಗಳೂರಿನಲ್ಲಿ ಮೃತಪಟ್ಟಿದ್ದರು. ಕೊರೋನ ದೃಢಪಟ್ಟು ಸಾವು ಸಂಭವಿಸಿದವರ ಪೈಕಿ ಇದು ಅತೀ ಹೆಚ್ಚಿನ ಸಂಖ್ಯೆ ಯಾಗಿದೆ ಎಂದು ವರದಿಯಾಗಿದೆ.