ಬೆಂಗಳೂರು: ಹಿರಾ ಫೌಂಡೇಶನ್ ಚೇರ್ ಮೆನ್ ‌ಪ್ರೊ.‌ ಕೆ. ಮೂಸಾ ನಿಧನ

0
301

ಸನ್ಮಾರ್ಗ ವಾರ್ತೆ

ಬೆಂಗಳೂರು: ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಹಿರಾ ಫೌಂಡೇಶನ್ ಟ್ರಸ್ಟ್‌ನ ಚೇರ್ ಮೆನ್ ಪ್ರೊಫೆಸರ್ ಕೆ.ಮೂಸಾ ಇಂದು ಸಂಜೆ ನಿಧನರಾಗಿದ್ದಾರೆ‌.

ಅವರಿಗೆ 76 ವರ್ಷ ವಯಸ್ಸಾಗಿತ್ತು.
ಮೂಲತಃ ಕೇರಳದ ಕಣ್ಣೂರು ನಿವಾಸಿಯಾಗಿರುವ ಇವರು ಕಳೆದ ನಲವತ್ತು ವರ್ಷಗಳಿಂದ ಬೆಂಗಳೂರಿನ ಆರ್.ಟಿ.‌ನಗರದಲ್ಲಿ ವಾಸವಾಗಿದ್ದರು.‌

ಆಲಿಘಡ್ ವಿ.ವಿ.ಯಲ್ಲಿ ಪದವೀಧರ ರಾಗಿರುವ ಇವರು ಜಮಾಅತೆ ಇಸ್ಲಾಮೀ ಹಿಂದ್ ಕೇರಳದ ಬೆಂಗಳೂರು ಘಟಕದಲ್ಲಿ ಅನೇಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು.

ಬೆಂಗಳೂರು ಹಿರಾಸೆಂಟರ್, ವೈಟ್‌ ಫೀಲ್ಡ್ ಇಸ್ಲಾಮಿಕ್ ಸೆಂಟರ್ ಹಾಗೂ ನಾಗರಭಾವಿ ಇಸ್ಲಾಮಿಕ್ ಸೆಂಟರ್ ನ ಸಾರಥಿಗಳಲ್ಲಿ ಒಬ್ಬರಾಗಿದ್ದರು.

ಮಾಧ್ಯಮಮ್ ಮಲಯಾಳಂ ನ ಬೆಂಗಳೂರು ಆವೃತ್ತಿಯ ಪ್ರಾರಂಭದಿಂದಲೇ ಪೋಷಕ ರಾಗಿದ್ದರು. ಮಲಯಾಳಿಯಾಗಿದ್ದರೂ ಕನ್ನಡ ಭಾಷೆಯ ಹಿತಾಕಾಂಕ್ಷಿಯಾಗಿದ್ದ ಮೂಸಾ ರವರು ಸನ್ಮಾರ್ಗ ವಾರಪತ್ರಿಕೆಯ ಬೆಳವಣಿಗೆಗೂ ಸಹಕಾರ ನೀಡುತ್ತಿದ್ದರು.

ಮೃತರ ನಿಧನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಬೆಳಗಾಮಿ ಮುಹಮ್ಮದ್ ಸಾದ್ , ಕೇರಳ ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಬ್ದುಲ್ ಅಝೀಝ್ ಸೇರಿದಂತೆ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.

ಅಲ್ಲಾಹನು ಅವರ ಕರ್ಮಗಳನ್ನು ಸ್ವೀಕರಿಸಿ ಪರಲೋಕದಲ್ಲಿ ಉನ್ನತ ಸ್ಥಾನ ದಯಪಾಲಿಸಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ‌ ಎಂದು ಸಂತಾಪ ಸೂಚಿಸಿದ್ದಾರೆ.‌

LEAVE A REPLY

Please enter your comment!
Please enter your name here