ಬೆಂಗಳೂರಿನ ಮೋದಿ ಮಸೀದಿ ಸುತ್ತ ವಿವಾದದ ಹುತ್ತ: ನಿಜ ಏನು?

0
490

ಶಿವಾಜಿನಗರ, ಜೂ. 24: ಸಾಮಾಜಿಕ ಮಾಧ್ಯಮದಲ್ಲಿ ಮೋದಿ ಮಸೀದಿ ವೈರಲ್ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಗೆ ಈ ಮೋದಿ ಹೆಸರನ್ನು ಜೋಡಿಸಲಾಗುತ್ತಿದೆ. ಆದರೆ ಪ್ರಧಾನಿ ಮೋದಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದು 170 ವರ್ಷ ಹಳೆಯ ಮಸೀದಿ ಎನ್ನಲಾಗಿದೆ. ಈ ಮಸೀದಿಗೆ ದಾನ ನೀಡಲಾದ ವ್ಯಕ್ತಿ ಮೋದಿ ಅಬ್ದುಲ್ ಗಫೂರ್ ಆಗಿದ್ದು ಅವರ ಹೆಸರನ್ನು ಇರಿಸಲಾಗಿದೆ ಎಂದು ತಿಳಿದು ಬಂದಿದೆ.

ಮಸೀದಿಯ ಹೆಸರಿರುವ ಇಂಗ್ಲಿಷ್ ಮತ್ತು ಉರ್ದು ಬೋರ್ಡನ್ನು ಪೋಸ್ಟ್ ಮಾಡಲಾಗುತ್ತಿದೆ. ಬೆಂಗಳೂರಿನ ಶಿವಾಜಿ ನಗರದಲ್ಲಿ ಮೋದಿ ಹೆಸರಿನಲ್ಲಿ ಮಸೀದಿ ಕಟ್ಟಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ನಡೆಯುತ್ತಿದೆ. ಮೋದಿ ಮಸೀದಿಯ ಅಧ್ಯಕ್ಷ ಮೌಲಾನಾ ಸೈಯದ್ ಅಲ್ತಾಫ್ ಅಹ್ಮದ್‍ರು ಮಸೀದಿಗೆ 170 ವರ್ಷಗಳ ಇತಿಹಾಸವಿದೆ ಎಂದು ಹೇಳುತ್ತಿರುವ ವೀಡಿಯೊ ಕೂಡ ಯುಟ್ಯೂಬ್‍ನಲ್ಲಿ ಲಭ್ಯವಿದೆ.