ಸನ್ಮಾರ್ಗ ವಾರ್ತೆ
ಬೆಂಗಳೂರು,ನ.13: ಬೆಂಗಳೂರು ನಗರಿಯಲ್ಲಿ ಕಾಟ ಕೊಡುತ್ತಿದ್ದ ಡುಪ್ಲಿಕೇಟ್ ಪ್ರೇತಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಯುಟ್ಯೂಬ್ ಚ್ಯಾನೆಲ್ಗಳಲ್ಲಿ ಪೋಸ್ಟ್ ಮಾಡುವ ಪ್ರಾಂಕ್ ವಿಡಿಯೊವನ್ನು ಚಿತ್ರಿಸುತ್ತಿದ್ದ ಏಳು ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಸೆರೆ ಹಿಡಿದಿದ್ದು ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಆರ್ಟಿ ನಗರದ ಶಾನ್ ನಲ್ಲಿಕ್, ನಿವೇದ್, ಸಜಿಲ್ ಮುಹಮ್ಮದ್, ಮುಹಮ್ಮದ್, ಶಾಕಿಬ್ ,ನಬೀಲ್ ಯೂಸುಫ್ ಬಂಧಿತರು ಎಲ್ಲರೂ ಇಪ್ಪತ್ತು ವರ್ಷ ಮೇಲ್ಮಟ್ಟ ಯುವಕರಾಗಿದ್ದಾರೆ.
ಇವರನ್ನು ನಂತರ ಪೊಲೀಸರು ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ. ಯಶವಂತಪುರದ ಶರೀಫ್ ನಗರದಲ್ಲಿ ಮಧ್ಯರಾತ್ರೆಗೆ ಇವರು ಬೂತದ ವೇಷಹಾಕಿ ಇವರು ಜನರನ್ನು ಹೆದರಿಸುತ್ತಿದ್ದರು.
ಉದ್ದ ಕೂದಲಿನ ವಿಗ್, ಬಿಳಿ ವಸ್ತ್ರ ಮುಖವಾಡದಿಂದ ಇವರು ಚಲಿಸುವ ವಾಹನಗಳನ್ನು ತಡೆಯುತ್ತಿದ್ದರು. ರಸ್ತೆಯ ನಡುವೆ ನಡೆದು ಹೆದರಿಸುತ್ತಿದ್ದರು. ಇವರ ಜೊತೆ ಇದ್ದವರು ರಹಸ್ಯವಾಗಿ ವೀಡಿಯೊ ಚಿತ್ರೀಕರಿಸುತ್ತಿದ್ದರು. ಕುಕ್ಕಿಪೀಡಿಯಾ ಎಂಬ ಯುಟ್ಯೂಬ್ ಚ್ಯಾನೆಲ್ಗೆ ವಿದ್ಯಾರ್ಥಿಗಳು ಪ್ರಾಂಕ್ ವೀಡಿಯೊ ಪೋಸ್ಟ್ ಮಾಡುತ್ತಿದ್ದರು.












