ನಮ್ಮ ಅನುಮತಿಯಿಲ್ಲದೆ ಭೀಮ ಕೊರೆಗಾಂವ್ ಪ್ರಕರಣ ಎನ್‍ಐಎ ವಹಿಸಿಕೊಂಡಿದೆ- ಮಹಾರಾಷ್ಟ್ರ ಸರಕಾರ

0
608

ಸನ್ಮಾರ್ಗ ವಾರ್ತೆ

ಮುಂಬೈ, ಜ. 25: ಭೀಮ-ಕೊರೆಗಾಂವ್ ಪ್ರಕರಣದ ತನಿಖೆಯನ್ನು ಕೇಂದ್ರ ಸರಕಾರದ ಎನ್‍ಐಎ ವಹಿಸಿಕೊಂಡಿದೆ. ಇದಕ್ಕೆ ಮಹಾರಾಷ್ಟ್ರ ಸರಕಾರದ ಅನುಮತಿಯನ್ನು ಪಡೆದುಕೊಂಡಿಲ್ಲ ಎಂದು ಸರಕಾರ ಹೇಳಿದೆ. ಪ್ರಕರಣದ ಮರು ತನಿಖೆಗೆ ಮಹಾರಾಷ್ಟ್ರ ಸರಕಾರ ಮುಂದಾದ ವೇಳೇ ಎನ್‍ಐಎ ಏಕಾಏಕಿ ಪ್ರಕರಣವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದೆ. ಇದು ಸಂವಿಧಾನದ ಉಲ್ಲಂಘನೆಯೆಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ ಮುಖ್ ಆರೋಪಿಸಿದರು. ಪ್ರಕರಣವನ್ನು ಎನ್‍ಐಎ ವಹಿಸಿಕೊಂಡು ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರಗಳ ನಡುವೆ ಪರಸ್ಪರ ಹೊಸ ಹೋರಾಟವನ್ನು ಸೃಷ್ಟಿಯಾಗಿದೆ. ಭೀಮ ಕೋರೆಗಾ೦ವ್ ಪ್ರಕರಣದ ಮರು ತನಿಖೆಗೆ ಸಂಬಂಧಿಸಿದ ಚರ್ಚೆಗಳಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್, ಗೃಹ ಸಚಿವ ಅನಿಲ್ ದೇಶಮುಖ್ ನೇತೃತ್ವವನ್ನು ನೀಡಿದ್ದರು. ಅರ್ಬನ್ ನಕ್ಸಲ್‍ಗಳು ಎಂದು ಆರೋಪಿಸಿ ಬಂಧಿಸಿದ ಮಾನವಹಕ್ಕು ಹೋರಾಟಗಾರರ ವಿರುದ್ಧ ಪೊಲೀಸರು ನೀಡಿದ ಸಾಕ್ಷ್ಯಗಳು ನಂಬಲರ್ಹವಲ್ಲ ಎಂದು ಸರಕಾರ ಹೇಳಿತ್ತು. ಇದಕ್ಕೆ ಸಂಬಂಧಿಸಿದ ಚರ್ಚೆ ನಡೆಸಲಾಗುತ್ತಿತ್ತು.

ಪೊಲೀಸರು ನಕಲಿ ಪರಾವೆಗಳನ್ನು ಸೃಷ್ಟಿಸಿದ್ದಾರೆ ಎಂಬ ಸಂದೇಹವನ್ನು ಮಹಾರಾಷ್ಟ್ರ ಸರಕಾರ ವ್ಯಕ್ತಪಡಿಸಿತ್ತು.
ಹದಿನೈದು ದಿವಸಗಳೊಳಗೆ ಸಾಕ್ಷ್ಯಗಳ ಮೂಲಗಳನ್ನು ವಿವರಿಸಲು ಪೊಲೀಸರಿಗೆ ಸಾಧ್ಯವಾಗದಿದ್ದರೆ ವಿಶೇಷ ತನಿಖಾ ತಂಡವನ್ನು ನಿಯೋಜಿಸಿ ಪುನಃ ತನಿಖೆ ನಡೆಸಲಾಗುವುದು ಎಂದು ಅನಿಲ್ ದೇಶ್‍ಮುಖ್ ತಿಳಿಸಿದ್ದರು. ಭೀಮ-ಕೊರೆಗಾಮವ್ ಪ್ರಕರಣವನ್ನು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸರಕಾರ ತಪ್ಪುದಾರಿಗೆಳೆದಿದೆ ಮತ್ತು ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ಮುಖ್ಯಮಂತ್ರಿ ಉದ್ಧವ್ ಠಾಕರೆಗೆ ಪತ್ರ ಬರೆದ ನಂತರ ಮರುತನಿಖೆಯ ಪ್ರಕ್ರಿಯೆ ಆರಂಭವಾಗಿತ್ತು.
ಪುಣೆಯಲ್ಲಿ ನಡೆದಿದ್ದು ಜಾತಿ ಸಂಘರ್ಷ ಎಂದು ಮತ್ತು ನೈಜ ಆರೋಪಿಗಳೆಡೆಗೆ ಸಾಗದೆ ಸಮಾಜದಲ್ಲಿ ಗೌರವಾನ್ವಿತರಾಗಿದ್ದ ಸಾಮಾಜಿಕ ಕಾರ್ಯಕರ್ತರ ವಿರುದ್ಧ ಕೇಸು ಹಾಕಲಾಗಿದೆ ಎಂದು ಪವಾರ್ ಪತ್ರದಲ್ಲಿ ಆರೋಪಿಸಿದ್ದರು.